ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೆಪ್ಟೆಂಬರ್‌ ತಿಂಗಳಲ್ಲಿ ದೇವರ ಆಳ್ವಿಕೆಯ ಬಗ್ಗೆ ವಿಶೇಷ ಅಭಿಯಾನ!

ಸೆಪ್ಟೆಂಬರ್‌ ತಿಂಗಳಲ್ಲಿ ದೇವರ ಆಳ್ವಿಕೆಯ ಬಗ್ಗೆ ವಿಶೇಷ ಅಭಿಯಾನ!

ದೇವರ ಆಳ್ವಿಕೆಗೆ ಮಾತ್ರ ಮನುಷ್ಯರ ಸಮಸ್ಯೆಗಳಿಗೆ ಪರಿಹಾರ ಕೊಡೋಕೆ ಆಗುತ್ತೆ ಅಂತ ಸೆಪ್ಟೆಂಬರ್‌ನಲ್ಲಿ ಜನ್ರಿಗೆ ಹೇಳಲಿಕ್ಕಿದ್ದೀವಿ. (ಮತ್ತಾ 24:14) ಇದ್ರಲ್ಲಿ ನೀವು ಹೇಗೆ ಭಾಗವಹಿಸಬಹುದು? ಆ ತಿಂಗಳಲ್ಲಿ ನಿಮ್ಮಿಂದ ಸಾಧ್ಯವಾಗುವಷ್ಟು ಜನ್ರಿಗೆ ದೇವರ ಆಳ್ವಿಕೆಯ ಬಗ್ಗೆ ಇರೋ ವಚನಗಳನ್ನ ತೋರಿಸಿ. ಯಾರಾದ್ರೂ ಆಸಕ್ತಿ ತೋರಿಸಿದ್ರೆ ಕಾವಲಿನಬುರುಜು ನಂ.2 2020ರ ಸಾರ್ವಜನಿಕ ಆವೃತ್ತಿ ಕೊಡಿ. ಆದಷ್ಟು ಬೇಗ ಅವ್ರಿಗೆ ಪುನರ್ಭೇಟಿ ಮಾಡಿ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಬೈಬಲ್‌ ಸ್ಟಡಿ ಶುರುಮಾಡೋಕೆ ಪ್ರಯತ್ನ ಮಾಡಿ. ಆ ತಿಂಗಳಲ್ಲಿ ಸಹಾಯಕ ಪಯನೀಯರ್‌ ಸೇವೆ ಮಾಡುವವರು 15 ಅಥವಾ 30 ತಾಸುಗಳನ್ನ ಮಾಡಬಹುದು.

ದೇವರ ಆಳ್ವಿಕೆಯನ್ನ ವಿರೋಧಿಸೋ ಎಲ್ಲ ಸರ್ಕಾರಗಳನ್ನ ಅದು ನಜ್ಜುಗುಜ್ಜು ಮಾಡಿ ಬೇಗನೆ ನಾಶ ಮಾಡಲಿಕ್ಕಿದೆ. (ದಾನಿ 2:44; 1ಕೊರಿಂ 15:24, 25) ಯೆಹೋವನಿಗೆ ಮತ್ತು ಆತನ ಆಳ್ವಿಕೆಗೆ ಸಂಪೂರ್ಣ ಬೆಂಬಲ ಕೊಡೋಕೆ ಈ ಅವಕಾಶವನ್ನ ಚೆನ್ನಾಗಿ ಉಪಯೋಗಿಸೋಣ.