ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಹೊಸ ಸೇವಾ ವರ್ಷಕ್ಕಾಗಿ ನೀವು ಯಾವ ಗುರಿಗಳನ್ನ ಇಟ್ಟಿದ್ದೀರಾ?

ಹೊಸ ಸೇವಾ ವರ್ಷಕ್ಕಾಗಿ ನೀವು ಯಾವ ಗುರಿಗಳನ್ನ ಇಟ್ಟಿದ್ದೀರಾ?

ಕಷ್ಟ ಆದ್ರೂ ಯೆಹೋವನ ಸೇವೆ ಜಾಸ್ತಿ ಮಾಡೋಕೆ, ಆತನನ್ನ ಖುಷಿಪಡಿಸೋಕೆ ನಾವು ಹಾಕೋ ಪ್ರಯತ್ನನೇ ಆಧ್ಯಾತ್ಮಿಕ ಗುರಿ. ಇದಕ್ಕೆ ನಾವು ಕೊಡೋ ಸಮಯ, ಶಕ್ತಿ ವೇಸ್ಟ್‌ ಆಗಲ್ಲ. ಬದಲಿಗೆ ಪ್ರೌಢರಾಗ್ತೀವಿ. (1ತಿಮೊ 4:15) ನಮ್ಮ ಗುರಿಗಳ ಬಗ್ಗೆ ಯಾಕೆ ಆಗಾಗ ಪರಿಶೀಲಿಸಬೇಕು? ಯಾಕಂದ್ರೆ ಸನ್ನಿವೇಶ ಬದಲಾಗ್ತಾನೆ ಇರುತ್ತೆ. ಉದಾಹರಣೆಗೆ ಮುಂಚೆ ಇಟ್ಟಿರೋ ಗುರಿ ಮುಟ್ಟೋಕೆ ಕಷ್ಟ ಆಗ್ತಿರಬಹುದು ಅಥವಾ ಈಗಾಗಲೇ ಆ ಗುರಿಯನ್ನ ಮುಟ್ಟಿರಬಹುದು.

ಹೊಸ ಸೇವಾ ವರ್ಷ ಶುರು ಆಗೋದಕ್ಕಿಂತ ಮುಂಚೆ ನಿಮ್ಮ ಗುರಿಗಳನ್ನ ಪರಿಶೀಲಿಸೋದು ಒಳ್ಳೇದು. ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ಯಾವೆಲ್ಲ ಗುರಿ ಇಡಬಹುದು ಅಂತ ಕುಟುಂಬ ಆರಾಧನೆಯಲ್ಲಿ ಚರ್ಚಿಸಿ.

ಕೆಳಗೆ ಕೊಟ್ಟಿರೋ ಯಾವ ಗುರಿಗಳು ಇಡೋಕೆ ಇಷ್ಟಪಡ್ತೀರಾ? ಆ ಗುರಿ ಮುಟ್ಟೋಕೆ ಏನೆಲ್ಲ ಮಾಡಬೇಕು ಅಂದ್ಕೊಂಡಿದ್ದೀರಾ?

ಬೈಬಲ್‌ ಓದೋದು, ವೈಯಕ್ತಿಕ ಅಧ್ಯಯನ, ಕೂಟಕ್ಕೆ ಹಾಜರಾಗೋದು, ಉತ್ತರ ಹೇಳೋದು. —ಕಾವಲಿನಬುರುಜು02 6/15 ಪುಟ 14 ಪ್ಯಾರ 14-15

ಸೇವೆ.—ಕಾವಲಿನಬುರುಜು23.05 ಪುಟ 27 ಪ್ಯಾರ 4-5

ಕ್ರೈಸ್ತ ಗುಣಗಳು.—ಕಾವಲಿನಬುರುಜು22.04 ಪುಟ 23 ಪ್ಯಾರ 5-6

ಇತರ ಗುರಿಗಳು: