ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನ ಶಾಶ್ವತ ಪ್ರೀತಿಯನ್ನ ಅನುಕರಿಸಿ

ಯೆಹೋವನ ಶಾಶ್ವತ ಪ್ರೀತಿಯನ್ನ ಅನುಕರಿಸಿ

ಯೆಹೋವ ಶಾಶ್ವತ ಪ್ರೀತಿಗೆ ಒಳ್ಳೇ ಮಾದರಿ. (ಕೀರ್ತ 103:11) ಆತನು ನಮ್ಮನ್ನ ತುಂಬ ತುಂಬ ಪ್ರೀತಿಸ್ತಾನೆ. ಈ ಪ್ರೀತಿ ಅಳಿದು ಹೋಗಲ್ಲ, ಸದಾಕಾಲಕ್ಕೂ ಇರುತ್ತೆ. ಇದೇ ಪ್ರೀತಿಯನ್ನ ಯೆಹೋವ ಇಸ್ರಾಯೇಲ್ಯರಿಗೆ ತುಂಬ ವಿಧಗಳಲ್ಲಿ ತೋರಿಸಿದನು. ಈಜಿಪ್ಟ್‌ನಿಂದ ಅವರನ್ನ ಬಿಡಿಸಿ ಹಾಲೂ ಜೇನೂ ಹರಿಯೋ ದೇಶಕ್ಕೆ ಕರ್ಕೊಂಡು ಬಂದನು. (ಕೀರ್ತ 105:42-44) ಆತನು ತನ್ನ ಜನ್ರಿಗೋಸ್ಕರ ಹೋರಾಡಿದನು ಮತ್ತು ಅವರು ಪದೇಪದೇ ಮಾಡಿದ ತಪ್ಪುಗಳನ್ನ ಮನ್ನಿಸಿದನು. (ಕೀರ್ತ 107:19, 20) “ಯೆಹೋವ ಶಾಶ್ವತ ಪ್ರೀತಿಯಿಂದ ಮಾಡಿದ್ದನ್ನೆಲ್ಲ ಸೂಕ್ಷ್ಮವಾಗಿ” ನೋಡುವಾಗ ಆತನ ತರ ನಾವೂ ಇರಬೇಕು ಅನ್ಸುತ್ತೆ.—ಕೀರ್ತ 107:43.

“ಯೆಹೋವನು ನಿಷ್ಠಾವಂತ ಪ್ರೀತಿಯಿಂದ ಮಾಡಿದ್ದೆಲ್ಲವನ್ನೂ ಧ್ಯಾನಿಸಿರಿ” ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನಾವು ಹೇಗೆಲ್ಲಾ ಶಾಶ್ವತ ಪ್ರೀತಿ ತೋರಿಸಬಹುದು?

  • ಶಾಶ್ವತ ಪ್ರೀತಿ ತೋರಿಸೋಕೆ ನಾವ್ಯಾಕೆ ತ್ಯಾಗಗಳನ್ನ ಮಾಡಬೇಕು?