ಬೈಬಲಿನಲ್ಲಿರುವ ನಿಧಿ
ಸ್ನೇಹಿತರನ್ನ ಆಯ್ಕೆ ಮಾಡುವಾಗ ಯೆಹೋವನಿಗೆ ನಿಷ್ಠೆ ತೋರಿಸಿ
ದೇವಜನರನ್ನ ಅಮ್ಮೋನಿಯರು ಮತ್ತು ಮೋವಾಬ್ಯರು ವಿರೋಧಿಸ್ತಿದ್ರು. ಅದಕ್ಕೆ “ಸತ್ಯ ದೇವರ ಸಭೆಗೆ ಯಾವತ್ತೂ ಬರಬಾರದು” ಅಂತ ಅವರಿಗೆ ಹೇಳಲಾಯ್ತು (ನೆಹೆ 13:1, 2; it-1-E ಪುಟ 95 ಪ್ಯಾರ 5)
ಮಹಾ ಪುರೋಹಿತನಾದ ಎಲ್ಯಾಷೀಬ ಒಬ್ಬ ಅಮ್ಮೋನಿಯನಿಗೆ ದೇವಾಲಯದ ಊಟದ ಕೋಣೆಯನ್ನ ಬಳಸೋಕೆ ಕೊಟ್ಟ (ನೆಹೆ 13:4, 5; ಕಾವಲಿನಬುರುಜು13 8/15 ಪುಟ 4 ಪ್ಯಾರ 5-6)
ದೇವರ ಶತ್ರುಗೋಸ್ಕರ ಎಲ್ಯಾಷೀಬ ಏನೆಲ್ಲ ಮಾಡಿದ್ನೋ ಅದನ್ನೆಲ್ಲ ನೆಹೆಮೀಯ ತೆಗೆದುಹಾಕಿದ. ಹೀಗೆ ನೆಹೆಮೀಯ ಯೆಹೋವನಿಗೆ ನಿಷ್ಠೆ ತೋರಿಸಿದ (ನೆಹೆ 13:7-9)
ಯೆಹೋವನನ್ನ ಪ್ರೀತಿಸದೆ ಇರೋ ಸ್ನೇಹಿತರನ್ನ ಮಾಡ್ಕೊಂಡ್ರೆ ಆತನಿಗೆ ನಿಷ್ಠೆ ತೋರಿಸೋಕೆ ಆಗುತ್ತಾ?—ಕಾವಲಿನಬುರುಜು96 3/15 ಪುಟ 16 ಪ್ಯಾರ 6.
ನಿಮ್ಮನ್ನೇ ಕೇಳಿಕೊಳ್ಳಿ, ‘ನನ್ನ ಸ್ನೇಹಿತರ ಬಗ್ಗೆ ಯೆಹೋವನಿಗೆ ಹೇಗೆ ಅನ್ಸುತ್ತೆ?’