ಬೈಬಲಿನಲ್ಲಿರುವ ನಿಧಿ
ನೆಹೆಮೀಯ ಸೇವೆ ಮಾಡಿಸ್ಕೊಳ್ಳೋಕೆ ಅಲ್ಲ, ಮಾಡೋಕೆ ಇಷ್ಟಪಟ್ಟ
ನೆಹೆಮೀಯ ತನಗಿದ್ದ ಅಧಿಕಾರವನ್ನ ಸ್ವಂತ ಲಾಭಕ್ಕೆ ಉಪಯೋಗಿಸ್ಕೊಳ್ಳಲಿಲ್ಲ (ನೆಹೆ 5:14, 15, 17, 18; ಕಾವಲಿನಬುರುಜು02 11/1 ಪುಟ 27 ಪ್ಯಾರ 3)
ನೆಹೆಮೀಯ ಕೆಲಸ ನೋಡ್ಕೊಳ್ಳೋದಷ್ಟೇ ಅಲ್ಲ, ಅದ್ರಲ್ಲಿ ಕೈಜೋಡಿಸಿದ (ನೆಹೆ 5:16; ಕಾವಲಿನಬುರುಜು16.09 ಪುಟ 6 ಪ್ಯಾರ 16)
‘ನಾನು ಮಾಡಿರೋ ಒಳ್ಳೇ ಕೆಲಸಗಳನ್ನ ನೆನಪಿಸ್ಕೊ’ ಅಂತ ನೆಹೆಮೀಯ ಯೆಹೋವನ ಹತ್ರ ಕೇಳ್ಕೊಂಡ (ನೆಹೆ 5:19; ಕಾವಲಿನಬುರುಜು00 2/1 ಪುಟ 32)
ನೆಹೆಮೀಯ ರಾಜ್ಯಪಾಲನಾಗಿದ್ರೂ ಎಲ್ರೂ ಅವನನ್ನ ದೊಡ್ಡ ವ್ಯಕ್ತಿ ತರ ನೋಡಬೇಕು ಅಂತ ಅವನು ಬಯಸಲಿಲ್ಲ. ಸಭೆಯಲ್ಲಿ ಜವಾಬ್ದಾರಿ ಇರೋ ಸಹೋದರರಿಗೆ ಇವನೊಂದು ಒಳ್ಳೇ ಮಾದರಿ.
ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಬೇರೆಯವರಿಗೋಸ್ಕರ ಏನು ಮಾಡಬೇಕು ಅಂತ ಯೋಚಿಸ್ತೀನಾ ಅಥವಾ ಅವರು ನನಗೋಸ್ಕರ ಏನು ಮಾಡ್ತಾರೆ ಅಂತ ಯೋಚಿಸ್ತೀನಾ?’