ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು

ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು

ಎಜ್ರ ದೇವರ ವಾಕ್ಯವನ್ನ ಮನಸ್ಸುಕೊಟ್ಟು ಓದಿದ. ಅವನಿಗೆ ಅದೆಷ್ಟು ಇಷ್ಟ ಆಯಿತೆಂದ್ರೆ ಅದರ ಪ್ರಕಾರನೇ ನಡ್ಕೊಂಡ (ಎಜ್ರ 7:10; ಕಾವಲಿನಬುರುಜು00 10/1 ಪುಟ 14 ಪ್ಯಾರ 8)

ಎಜ್ರ ನಡ್ಕೊಂಡ ವಿಧದಿಂದ ದೇವರ ವಿವೇಕವನ್ನ ಜನ್ರು ಅರ್ಥಮಾಡ್ಕೊಂಡ್ರು (ಎಜ್ರ 7:25; si-E ಪುಟ 75 ಪ್ಯಾರ 5)

ಎಜ್ರ ತನ್ನನ್ನ ದೇವರ ಮುಂದೆ ತಗ್ಗಿಸಿಕೊಂಡ. ಈ ತರ ಮಾಡಿದ್ರೆ ಯೆಹೋವ ತನ್ನನ್ನ ಮಾರ್ಗದರ್ಶಿಸ್ತಾನೆ, ಕಾಪಾಡ್ತಾನೆ ಅನ್ನೋ ಭರವಸೆ ಅವನಿಗಿತ್ತು (ಎಜ್ರ 8:21-23; ಕಾವಲಿನಬುರುಜು91-E 7/15 ಪುಟ 29)

ದೇವರ ವಿವೇಕ ಎಜ್ರನಲ್ಲಿ ಇರೋದನ್ನ ನೋಡಿ ರಾಜ ಅವನಿಗೆ ದೊಡ್ಡ ಜವಾಬ್ದಾರಿಗಳನ್ನ ಕೊಟ್ಟ. ಎಜ್ರನ ತರಾನೇ ನಮ್ಮ ನಡೆನುಡಿಯಿಂದ ಯೆಹೋವನಿಗೆ ಮಹಿಮೆ ತರಬಹುದು.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ದೇವರ ನೀತಿನಿಯಮ ಪಾಲಿಸೋದನ್ನ ನೋಡಿ ಸತ್ಯದಲ್ಲಿ ಇಲ್ಲದಿರೋರು ನನ್ನನ್ನ ಗೌರವಿಸ್ತಾರಾ?’