ಕ್ರೈಸ್ತ ಜೀವನ
ಸಿಹಿಸುದ್ದಿ ‘ಪರವಾಗಿ ಮಾತಾಡೋದು ಮತ್ತು ಅದಕ್ಕಾಗಿ ಕಾನೂನುಬದ್ಧ ಹಕ್ಕು ಪಡೆಯೋದು’
ವಿರೋಧಿಗಳು ಆಲಯ ಕಟ್ಟೋ ಕೆಲಸವನ್ನ ನಿಲ್ಲಿಸೋಕೆ ಪ್ರಯತ್ನ ಮಾಡಿದಾಗ ಇಸ್ರಾಯೇಲ್ಯರು ಅದಕ್ಕೆ ಬೇಕಾದ ಕಾನೂನುಬದ್ಧ ಹಕ್ಕನ್ನ ಪಡ್ಕೊಂಡ್ರು. (ಎಜ್ರ 5:11-16) ಅದೇ ತರ ಕ್ರೈಸ್ತರು ಕೂಡ ಸಿಹಿಸುದ್ದಿಯನ್ನ ಸಾರೋಕೆ ಕಾನೂನುಬದ್ಧ ಹಕ್ಕನ್ನ ಪಡೆಯೋಕೆ ಬೇಕಾಗಿರೋದನ್ನೆಲ್ಲ ಮಾಡ್ತಾರೆ. (ಫಿಲಿ 1:7) ಇದಕ್ಕೋಸ್ಕರ 1936ರಲ್ಲಿ ಮುಖ್ಯ ಕಾರ್ಯಾಲಯದಲ್ಲಿ ಲೀಗಲ್ ಡಿಪಾರ್ಟ್‌ಮೆಂಟನ್ನ ಶುರುಮಾಡಿದ್ರು. ಇಡೀ ಲೋಕದಲ್ಲಿ ಸಿಹಿಸುದ್ದಿ ಸಾರೋ ಹಕ್ಕನ್ನ ಬಳಸೋಕೆ ಈ ಡಿಪಾರ್ಟ್‌ಮೆಂಟ್ ಸಹಾಯಮಾಡುತ್ತೆ. ಸಿಹಿಸುದ್ದಿ ಸಾರೋಕೆ ಈ ಡಿಪಾರ್ಟ್‌ಮೆಂಟ್ ಏನೆಲ್ಲ ಮಾಡಿದೆ ಮತ್ತು ಇದ್ರಿಂದ ನಮಗೆ ಹೇಗೆ ಪ್ರಯೋಜನ ಆಗಿದೆ?
ಮುಖ್ಯ ಕಾರ್ಯಾಲಯದ ಲೀಗಲ್ ಡಿಪಾರ್ಟ್‌ಮೆಂಟಿನ ಪ್ರವಾಸ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಯೆಹೋವನ ಸಾಕ್ಷಿಗಳು ಯಾವೆಲ್ಲ ಸಮಸ್ಯೆಗಳನ್ನ ಎದುರಿಸಿದ್ರು?
-
ಕಾನೂನಿಗೆ ಸಂಬಂಧಪಟ್ಟ ಯಾವೆಲ್ಲ ಜಯ ನಮಗೆ ಸಿಕ್ಕಿದೆ? ಒಂದು ಉದಾಹರಣೆ ಕೊಡಿ.
-
ಸಿಹಿಸುದ್ದಿ ‘ಪರವಾಗಿ ಮಾತಾಡೋಕೆ ಮತ್ತು ಅದಕ್ಕಾಗಿ ಕಾನೂನುಬದ್ಧ ಹಕ್ಕು ಪಡೆಯೋಕೆ’ ನೀವೇನು ಮಾಡಬೇಕು?