ನಮ್ಮ ಕ್ರೈಸ್ತ ಜೀವನ
ಒಂದು ವರ್ಷವಾದರೂ ಪ್ರಯತ್ನಿಸಿ ನೋಡುತ್ತೀರಾ?
ಏನನ್ನು? ಪಯನೀಯರಿಂಗನ್ನು! ಹೀಗೆ ಮಾಡುವಾಗ ನೀವು ಲೆಕ್ಕವಿಲ್ಲದಷ್ಟು ಆಶೀರ್ವಾದಗಳನ್ನು ಅನುಭವಿಸುತ್ತೀರಿ!—ಜ್ಞಾನೋ 10:22.
ಪಯನೀಯರಿಂಗ್ ಮಾಡುವುದರಿಂದ . . .
-
ನೀವು ಬೋಧಿಸುವುದರಲ್ಲಿ ನಿಪುಣರಾಗುತ್ತೀರಿ ಮತ್ತು ಸೇವೆಯನ್ನು ಹೆಚ್ಚು ಆನಂದಿಸುತ್ತೀರಿ
-
ಯೆಹೋವನೊಂದಿಗಿನ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಆತನ ಬಗ್ಗೆ ಇನ್ನೊಬ್ಬರೊಂದಿಗೆ ಎಷ್ಟು ಹೆಚ್ಚು ಮಾತಾಡುತ್ತೀರೋ, ಆತನ ಭಯ-ವಿಸ್ಮಯಗೊಳಿಸುವಂಥ ಗುಣಗಳು ನಿಮಗೆ ಅಷ್ಟೇ ಹೆಚ್ಚು ನೆನಪಾಗುತ್ತವೆ
-
ನಿಮ್ಮ ವಿಷಯಗಳಿಗಿಂತ ರಾಜ್ಯದ ವಿಷಯಗಳಿಗೆ ಪ್ರಥಮ ಸ್ಥಾನ ಕೊಡುವುದರಲ್ಲಿರುವ ಸಂತೃಪ್ತಿಯನ್ನು ಮತ್ತು ಇತರರಿಗೆ ಕೊಡುವುದರಲ್ಲಿರುವ ಆನಂದವನ್ನು ಅನುಭವಿಸುತ್ತೀರಿ.—ಮತ್ತಾ 6:33; ಅಕಾ 20:35
-
ಸಂಚರಣ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ನಡೆಸುವ ಪಯನೀಯರ್ ಕೂಟಕ್ಕೆ, ಸರ್ಕಿಟ್ ಸಮ್ಮೇಳನದಲ್ಲಿ ನಡೆಯುವ ವಿಶೇಷ ಕೂಟಕ್ಕೆ ಮತ್ತು ಪಯನೀಯರ್ ಸೇವಾ ಶಾಲೆಗೆ ಹಾಜರಾಗುವ ಅವಕಾಶ ಸಿಗುತ್ತದೆ
-
ಬೈಬಲ್ ಅಧ್ಯಯನ ಆರಂಭಿಸಲು ಮತ್ತು ನಡೆಸಲು ಅನೇಕ ಅವಕಾಶಗಳು ಸಿಗುತ್ತವೆ
-
ಜೊತೆ ಸೌವಾರ್ತಿಕರೊಂದಿಗೆ ಹೆಚ್ಚು ಸಮಯ ಕಳೆಯಬಹುದು, ಒಬ್ಬರು ಇನ್ನೊಬ್ಬರಿಂದ ಉತ್ತೇಜನ ಹೊಂದಬಹುದು.—ರೋಮ 1:11, 12