ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಸುಖ ಸಂಸಾರಕ್ಕೆ ಏನು ಅವಶ್ಯ? (T-32 ಕರಪತ್ರದ ಮುಖಪುಟ)

ಪ್ರಶ್ನೆ: ನಮ್ಮ ಕುಟುಂಬ ಜೀವನ ಚೆನ್ನಾಗಿರಬೇಕು ಅಂತ ನಾವೆಲ್ಲರೂ ಬಯಸ್ತೇವೆ. ಈ ಪ್ರಶ್ನೆ ನೋಡಿ, “ಸುಖ ಸಂಸಾರಕ್ಕೆ ಏನು ಅವಶ್ಯ?” ನಿಮಗೇನನಿಸುತ್ತೆ?

ವಚನ: ಲೂಕ 11:28

ಕರಪತ್ರ ಕೊಡುವಾಗ ಹೀಗೆ ಹೇಳಿ: ಕುಟುಂಬ ಜೀವನ ಸಂತೋಷವಾಗಿರಲಿಕ್ಕೆ ಸಹಾಯ ಮಾಡುವ ಪವಿತ್ರ ಗ್ರಂಥದ ತತ್ವಗಳು ಈ ಕರಪತ್ರದಲ್ಲಿವೆ.

ಸುಖ ಸಂಸಾರಕ್ಕೆ ಏನು ಅವಶ್ಯ? (T-32 ಕರಪತ್ರದ ಕೊನೆಯ ಪುಟ)

ಪ್ರಶ್ನೆ: ನಾವೆಲ್ಲರೂ ನಮ್ಮ ಕುಟುಂಬ ಜೀವನ ಸಂತೋಷವಾಗಿರಬೇಕು ಅಂತ ಬಯಸ್ತೇವೆ. ಆದ್ರೆ ಹಾಗಿರಬೇಕೆಂದರೆ ಏನು ಮಾಡ್ಬೇಕು? ಕುಟುಂಬದಲ್ಲಿರುವ ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸುವುದು? ಕುಟುಂಬದ ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿಯ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ ಅಂತ ನಿಮಗೆ ಓದಿ ತಿಳಿಸ್ಬಹುದಾ?

ವಚನ: ಎಫೆ 5:1, 2 ಅಥವಾ ಕೊಲೊ 3:18-21

ಕರಪತ್ರ ಕೊಡುವಾಗ ಹೀಗೆ ಹೇಳಿ: ಕುಟುಂಬ ಜೀವನ ಸಂತೋಷವಾಗಿರಲಿಕ್ಕೆ ಸಹಾಯ ಮಾಡುವ ಪವಿತ್ರ ಗ್ರಂಥದ ತತ್ವಗಳು ಈ ಕರಪತ್ರದಲ್ಲಿವೆ.

ದೇವರಿಂದ ನಿಮಗೊಂದು ಸಿಹಿಸುದ್ದಿ!

ಪ್ರಶ್ನೆ: ಈಗಿನ ವಾರ್ತಾಪತ್ರಿಕೆಯಲ್ಲಿ ನಾವು ಓದುವ ವಿಷಯಗಳನ್ನು ಎಷ್ಟೋ ವರ್ಷಗಳ ಹಿಂದೆ ಬೈಬಲ್‌ನಲ್ಲಿ ಹೇಳಲಾಗಿತ್ತು. ಅಂಥ ವಿಷಯಗಳ ಬಗ್ಗೆ ನಾನೀಗ ಓದುತ್ತೇನೆ. ಇದರಲ್ಲಿರುವ ಯಾವ ವಿಷಯಗಳನ್ನು ನೀವು ನೋಡಿದ್ದೀರಿ ಅಥವಾ ಕೇಳಿಸಿಕೊಂಡಿದ್ದೀರಿ ಅಂತ ಹೇಳ್ತೀರಾ?

ವಚನ: 2ತಿಮೊ 3:1-5

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಇಂಥ ಪರಿಸ್ಥಿತಿ ದೇವರನ್ನು ಪ್ರೀತಿಸುವ ಜನರಿಗೆ ಸಿಹಿಸುದ್ದಿಯಾಗಿದೆ ಹೇಗೆ? ಎಂದು ಈ ಕಿರುಹೊತ್ತಗೆ ವಿವರಿಸುತ್ತದೆ. [lಪಾಠ 1, ಪ್ರಶ್ನೆ 2 ನ್ನು ತೋರಿಸಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.