ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 45-51

ಯೆಹೋವನು ಜಜ್ಜಿಹೋದ ಮನಸ್ಸನ್ನು ತಿರಸ್ಕರಿಸುವುದಿಲ್ಲ

ಯೆಹೋವನು ಜಜ್ಜಿಹೋದ ಮನಸ್ಸನ್ನು ತಿರಸ್ಕರಿಸುವುದಿಲ್ಲ

ಬತ್ಷೆಬೆಯೊಂದಿಗೆ ದಾವೀದನು ಮಾಡಿದ ಘೋರ ಪಾಪವನ್ನು ಪ್ರವಾದಿ ನಾತಾನನು ಅವನಿಗೆ ತಿಳಿಸಿದ ನಂತರ ದಾವೀದನು ಕೀರ್ತನೆ 51 ನೇ ಅಧ್ಯಾಯವನ್ನು ಬರೆದನು. ದಾವೀದನ ಮನಸ್ಸಾಕ್ಷಿ ತುಂಬ ಚುಚ್ಚಿತು ಮತ್ತು ತನ್ನ ತಪ್ಪನ್ನು ದೀನತೆಯಿಂದ ಒಪ್ಪಿಕೊಂಡನು.—2ಸಮು 12:1-14.

ದಾವೀದನು ತಪ್ಪು ಮಾಡಿದ್ದರೂ ಪುನಃ ಆಧ್ಯಾತ್ಮಿಕ ಆರೋಗ್ಯವನ್ನು ಪಡೆಯಲು ಸಾಧ್ಯವಿತ್ತು

51:3, 4, 8-12, 17

  • ಪಶ್ಚಾತ್ತಾಪಪಟ್ಟು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಮುಂಚೆ ಅವನ ಮನಸ್ಸಾಕ್ಷಿ ಅವನನ್ನು ನರಳುವಂತೆ ಮಾಡಿತು

  • ದಾವೀದನಿಗೆ ದೇವರ ಮೆಚ್ಚಿಗೆ ಇಲ್ಲದಿದ್ದಾಗ ಎಲುಬುಗಳನ್ನು ಜಜ್ಜಿದಷ್ಟು ನೋವಾಯಿತು

  • ಕ್ಷಮೆಯನ್ನು, ಆಧ್ಯಾತ್ಮಿಕ ಆರೋಗ್ಯವನ್ನು ಮತ್ತು ಮುಂಚೆ ತನಗಿದ್ದ ಸಂತೋಷವನ್ನು ಪಡೆಯಲು ಹಂಬಲಿಸಿದನು

  • ಯೆಹೋವನಿಗೆ ವಿಧೇಯನಾಗುವ ಸಿದ್ಧಮನಸ್ಸನ್ನು ಬೆಳೆಸಿಕೊಳ್ಳಲು ತನಗೆ ಸಹಾಯ ಮಾಡುವಂತೆ ದೀನತೆಯಿಂದ ಬೇಡಿಕೊಂಡನು

  • ಯೆಹೋವನು ಕ್ಷಮಿಸುತ್ತಾನೆಂಬ ಪೂರ್ಣ ಭರವಸೆ ಅವನಿಗಿತ್ತು