ಜೂನ್ 6-12
ಕೀರ್ತನೆ 34-37
ಗೀತೆ 95 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಲ್ಲಿ ಭರವಸೆಯಿಟ್ಟು ಒಳ್ಳೆಯದನ್ನು ಮಾಡು”: (10 ನಿ.)
ಕೀರ್ತ 37:1, 2—ನಮ್ಮ ಸಂಪೂರ್ಣ ಗಮನ ಕೆಟ್ಟವರಿಗೆ ಸಿಗುವ ಯಶಸ್ಸಿನ ಮೇಲಲ್ಲ, ಯೆಹೋವನ ಸೇವೆಯ ಮೇಲಿರಬೇಕು (ಕಾವಲಿನಬುರುಜು 03 12/1 ಪು. 9-10, ಪ್ಯಾ. 3-6)
ಕೀರ್ತ 37:3-6—ಯೆಹೋವನ ಮೇಲೆ ಭರವಸೆ ಇಡಿ, ಒಳ್ಳೇದನ್ನು ಮಾಡಿ, ಆಶೀರ್ವಾದ ಪಡೆಯಿರಿ (ಕಾವಲಿನಬುರುಜು 03 12/1 ಪು. 10-13, ಪ್ಯಾ. 7-15)
ಕೀರ್ತ 37:7-11—ಯೆಹೋವನು ಕೆಟ್ಟವರನ್ನೆಲ್ಲ ನಾಶಮಾಡುವ ತನಕ ಕಾಯಿರಿ (ಕಾವಲಿನಬುರುಜು 03 12/1 ಪು. 13-14, ಪ್ಯಾ. 16-20)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 34:18—“ಮುರಿದ ಮನಸ್ಸುಳ್ಳವರಿಗೆ” ಮತ್ತು ‘ಕುಗ್ಗಿಹೋದವರಿಗೆ’ ಯೆಹೋವನು ಹೇಗೆ ಸ್ಪಂದಿಸುತ್ತಾನೆ? (ಕಾವಲಿನಬುರುಜು 11 ಅಕ್ಟೋ-ಡಿಸೆಂ ಪು. 12)
ಕೀರ್ತ 34:20—ಈ ಪ್ರವಾದನೆ ಯೇಸುವಿನಲ್ಲಿ ಹೇಗೆ ನೆರವೇರಿತು? (ಕಾವಲಿನಬುರುಜು 13 12/15 ಪು. 21, ಪ್ಯಾ. 19)
ಈ ವಾರದ ಬೈಬಲ್ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 35:19–36:12
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವಿಡಿಯೋ ಬಳಸಿ ಕಲಿಸಿ”: (15 ನಿ.) ಚರ್ಚೆ. “ಹೇಗೆ ಮಾಡುವುದು” ಉಪಶೀರ್ಷಿಕೆ ಕೆಳಗಿರುವ ವಿಷಯವನ್ನು ವಿವರಿಸಲು ಬೈಬಲನ್ನು ಯಾರು ಬರೆಸಿದರು? ವಿಡಿಯೋ ಬಳಸಿ. (ನಮ್ಮ ವೆಬ್ಸೈಟಿನಲ್ಲಿ ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳುಗೆ ಹೋಗಿ ಸಿಹಿಸುದ್ದಿ ಕಿರುಹೊತ್ತಗೆಯನ್ನು ಕ್ಲಿಕ್ಕಿಸಿ, “ಸಿಹಿಸುದ್ದಿ ನಿಜವಾಗ್ಲೂ ದೇವರಿಂದನಾ?” ಪಾಠವನ್ನು ತೆರೆದರೆ ಕೆಳಗೆ ಈ ವಿಡಿಯೋ ಇದೆ)
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 1 ಪ್ಯಾ. 14-27, ಪು. 18 ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 52 ಮತ್ತು ಪ್ರಾರ್ಥನೆ