ಯೆಹೋವನಲ್ಲಿ ಭರವಸೆಯಿಟ್ಟು ಒಳ್ಳೆಯದನ್ನು ಮಾಡು
“ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚುಪಡಬೇಡ”
-
ದುಷ್ಟ ಜನರು ಸ್ವಲ್ಪ ಕಾಲಕ್ಕೆ ಪಡೆಯುವ ಯಶಸ್ಸನ್ನು ನೋಡಿ ನೀವು ನಿಮ್ಮನ್ನು ಯೆಹೋವನ ಆರಾಧನೆಯಿಂದ ಅಪಕರ್ಷಿತರಾಗದಂತೆ ನೋಡಿಕೊಳ್ಳಿ. ಆಧ್ಯಾತ್ಮಿಕ ಆಶೀರ್ವಾದ ಮತ್ತು ಗುರಿಗಳ ಮೇಲೆ ನಿಮ್ಮ ದೃಷ್ಟಿಯನ್ನಿಡಿ
“ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು”
-
ಸಂಶಯ ಅಥವಾ ಚಿಂತೆಗಳನ್ನು ನಿಭಾಯಿಸಲು ಯೆಹೋವನು ಸಹಾಯ ಮಾಡುತ್ತಾನೆಂದು ಭರವಸೆಯಿಡಿ. ಆಗ ಆತನು ನಂಬಿಗಸ್ತರಾಗಿರಲು ನಿಮಗೆ ಸಹಾಯ ಮಾಡುತ್ತಾನೆ
-
ದೇವರ ರಾಜ್ಯದ ಸುವಾರ್ತೆಯನ್ನು ಇತರರಿಗೆ ತಿಳಿಸುವುದರಲ್ಲಿ ತಲ್ಲೀನರಾಗಿರಿ
‘ಯೆಹೋವನಲ್ಲಿ ಸಂತೋಷಿಸು’
-
ಯೆಹೋವನ ಬಗ್ಗೆ ಚೆನ್ನಾಗಿ ತಿಳಿಯುವ ಉದ್ದೇಶದಿಂದ ದೇವರ ವಾಕ್ಯವನ್ನು ಓದಲು ಮತ್ತು ಧ್ಯಾನಿಸಲು ಸಮಯ ನಿಗದಿ ಮಾಡಿಕೊಳ್ಳಿ
‘ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಡು’
-
ಯಾವುದೇ ಸಮಸ್ಯೆಗಳನ್ನು ಎದುರಿಸಲು ಯೆಹೋವನು ಸಹಾಯ ಮಾಡುತ್ತಾನೆಂದು ಸಂಪೂರ್ಣ ಭರವಸೆಯಿಡಿ
-
ವಿರೋಧ, ಹಿಂಸೆ ಅಥವಾ ಅಪವಾದಗಳ ನಡುವೆಯೂ ಒಳ್ಳೇ ನಡತೆಯನ್ನು ಕಾಪಾಡಿಕೊಳ್ಳಿ
“ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು”
-
ಹಿಂದೆ ಮುಂದೆ ಯೋಚಿಸದೆ ಏನನ್ನೂ ಮಾಡಬೇಡಿ. ಇದರಿಂದ ನೀವು ಸಂತೋಷ ಮತ್ತು ಆಧ್ಯಾತ್ಮಿಕ ಸುರಕ್ಷತೆಯನ್ನು ಕಳೆದುಕೊಳ್ಳಬಹುದು
“ದೀನರು ದೇಶವನ್ನು ಅನುಭವಿಸುವರು”
-
ದೀನತೆಯನ್ನು ಕಲಿಯಿರಿ. ನೀವು ಅನುಭವಿಸುತ್ತಿರುವ ಅನ್ಯಾಯವನ್ನು ತೆಗೆದು ಹಾಕುವ ತನಕ ತಾಳ್ಮೆಯಿಂದ ಕಾಯುತ್ತಾ ಇರಿ
-
ಜೊತೆ ನಂಬಿಗಸ್ತರಿಗೆ ಸಹಾಯ ಮಾಡಿ ಮತ್ತು ದುಖಃದಲ್ಲಿರುವವರಿಗೆ ಬಲು ಬೇಗನೇ ಬರಲಿರುವ ದೇವರ ರಾಜ್ಯದ ವಾಗ್ದಾನದ ಬಗ್ಗೆ ತಿಳಿಸಿ ಸಂತೈಸಿರಿ