ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವಿಡಿಯೋ ಬಳಸಿ ಕಲಿಸಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವಿಡಿಯೋ ಬಳಸಿ ಕಲಿಸಿ

ಏಕೆ ಪ್ರಾಮುಖ್ಯ:

ವಿಡಿಯೋಗಳನ್ನು ನೋಡಲೂಬಹುದು, ಕೇಳಲೂಬಹುದು. ಆದ್ದರಿಂದ ಅವು ಜನರ ಹೃದಯಗಳನ್ನು ತಲಪುತ್ತವೆ, ಜನರ ಗಮನವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಅವರ ಮನಸ್ಸಿನಲ್ಲಿ ವಿಷಯಗಳು ಅಚ್ಚಳಿಯದೆ ಉಳಿಯಲು ಸಹಾಯ ಮಾಡುತ್ತವೆ. ಈ ರೀತಿ ದೃಶ್ಯಗಳನ್ನು ತೋರಿಸಿ ಕಲಿಸುವುದರಲ್ಲಿ ಯೆಹೋವನೇ ಉತ್ತಮ ಮಾದರಿ.—ಅಕಾ 10:9-16; ಪ್ರಕ 1:1.

ದೇವರಿಗೊಂದು ಹೆಸರಿದೆಯಾ?, ಬೈಬಲನ್ನು ಯಾರು ಬರೆಸಿದರು? ಮತ್ತು ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ಎಂಬ ವಿಡಿಯೋಗಳು ಸಿಹಿಸುದ್ದಿ ಕಿರುಹೊತ್ತಗೆಯ 2 ಮತ್ತು 3 ಅಧ್ಯಾಯಕ್ಕೆ ಸಂಬಂಧಪಟ್ಟವುಗಳು. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?, ಬೈಬಲ್‌ ಅಧ್ಯಯನ ಅಂದರೇನು? ಮತ್ತು ರಾಜ್ಯ ಸಭಾಗೃಹ ಅಂದರೇನು? ಎಂಬ ವಿಡಿಯೋಗಳು ಜನರನ್ನು ನಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಅಥವಾ ಸಭಾ ಕೂಟಗಳಿಗೆ ಬರಲು ಪ್ರೊತ್ಸಾಹಿಸುತ್ತವೆ. ನಮ್ಮ ಇನ್ನೂ ಕೆಲವು ವಿಡಿಯೋಗಳು ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸಲು ಸಹಾಯಕ.—ನಮ್ಮ ರಾಜ್ಯ ಸೇವೆ 5/13 ಪುಟ 3.

ಹೇಗೆ ಮಾಡುವುದು:

  • ನೀವು ಮನೆಯವರಿಗೆ ತೋರಿಸಲು ಬಯಸುವ ವಿಡಿಯೋವನ್ನು ಮೊದಲೇ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ

  • ಒಂದು ಅಥವಾ ಎರಡು ಪ್ರಶ್ನೆಗಳನ್ನು ತಯಾರಿಸಿಟ್ಟುಕೊಳ್ಳಿ. ಅವುಗಳ ಉತ್ತರ ನೀವು ತೋರಿಸುವ ವಿಡಿಯೋದಲ್ಲಿರಬೇಕು

  • ವಿಡಿಯೋವನ್ನು ಜೊತೆಯಾಗಿ ನೋಡಿ

  • ಮುಖ್ಯ ವಿಷಯವನ್ನು ಚರ್ಚಿಸಿ

ಇದನ್ನು ಮಾಡಿ ನೋಡಿ:

  • ಕರಪತ್ರದ ಹಿಂದಿನ ಪುಟಕ್ಕೆ ತಿರುಗಿಸಿ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋವಿನ ಕೋಡ್‌ ತೋರಿಸಿ, ಹೇಗೆ ಉಪಯೋಗಿಸುವುದೆಂದು ವಿವರಿಸಿ.

  • ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ಎಂಬ ವಿಡಿಯೋ ತೋರಿಸಿ. ನಂತರ ಸಿಹಿಸುದ್ದಿ ಕಿರುಹೊತ್ತಿಗೆಯ ಪಾಠ 3 ರ ಬಗ್ಗೆ ಮಾತಾಡಿ ಅದನ್ನು ಕೊಡಿ.