ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಈ ಲೋಕ ಯಾರ ಕೈಯಲ್ಲಿದೆ? (T-33 ಮುಖಪುಟ)

ಪ್ರಶ್ನೆ: ಈ ಲೋಕ ನಿಜವಾಗಿಯೂ ಯಾರ ಕೈಯಲ್ಲಿದೆ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನೀವೇನು ಉತ್ತರ ಕೊಡುತ್ತೀರಿ? ಅನೇಕ ಜನರು ‘ದೇವರ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಆದರೆ ಪವಿತ್ರ ಗ್ರಂಥ ಏನು ಹೇಳುತ್ತದೆಂದು ನಿಮಗೆ ತೋರಿಸಬಹುದಾ?

ವಚನ: 1 ಯೋಹಾನ 5:19

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕರಪತ್ರದಲ್ಲಿದೆ.

ಈ ಲೋಕ ಯಾರ ಕೈಯಲ್ಲಿದೆ? (T-33 ಪುಟ 4)

ಪ್ರಶ್ನೆ: ಈ ಲೋಕ ದೇವರ ನಿಯಂತ್ರಣದಲ್ಲಿದೆ ಎಂದು ಹೆಚ್ಚಿನ ಜನರು ನೆನಸುತ್ತಾರೆ. ಅದು ನಿಜವಾಗಿದ್ದರೆ ಈ ಲೋಕದಲ್ಲಿ ಯಾಕೆ ಇಷ್ಟೊಂದು ಕಷ್ಟಗಳಿವೆ? ಈ ಭೂಮಿಯನ್ನು ದೇವರು ತನ್ನ ಹಿಡಿತಕ್ಕೆ ತೆಗೆದುಕೊಂಡಾಗ ಏನು ಮಾಡುತ್ತಾನೆಂದು ಪವಿತ್ರ ಗ್ರಂಥದಿಂದ ತೋರಿಸಬಹುದಾ?

ವಚನ: ಕೀರ್ತನೆ 37:10, 11

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಲೋಕ ಈಗ ಯಾರ ಹಿಡಿತದಲ್ಲಿದೆ ಮತ್ತು ಭವಿಷ್ಯದಲ್ಲಿ ಹೇಗಿರುತ್ತದೆ ಎಂದು ಈ ಕರಪತ್ರ ತಿಳಿಸುತ್ತದೆ.

ಕರಪತ್ರಗಳು

ಪ್ರಶ್ನೆ: ಈ ಪ್ರಶ್ನೆಯನ್ನು ನೋಡಿ. [ಕರಪತ್ರದ ಮುಖಪುಟದಲ್ಲಿರುವ ಪ್ರಶ್ನೆಯನ್ನು ಮತ್ತು ಅದಕ್ಕಿರುವ ಉತ್ತರಗಳನ್ನು ಓದಿ.] ನಿಮಗೇನನಿಸುತ್ತದೆ?

ವಚನ: [ಕರಪತ್ರದ 2ನೇ ಪುಟದಲ್ಲಿರುವ ವಚನ]

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ವಚನದಿಂದ ನಿಮಗೇನು ಪ್ರಯೋಜನ ಎಂದು ಈ ಕರಪತ್ರ ವಿವರಿಸುತ್ತದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.