ನಮ್ಮ ಕ್ರೈಸ್ತ ಜೀವನ
ಹೆತ್ತವರೇ, ಮಕ್ಕಳು ಯೆಹೋವನಿಗೆ ಹತ್ತಿರವಾಗಲು ನಿಮ್ಮಿಂದ ಆಗುವುದನ್ನೆಲ್ಲ ಮಾಡಿ
ದೇವಭಯವಿರುವ ಹೆತ್ತವರಿಗೆ ತಮ್ಮ ಮಕ್ಕಳು ಯೆಹೋವನ ನಂಬಿಗಸ್ತ ಸೇವಕರಾಗುವುದನ್ನು ನೋಡುವ ಆಸೆ ಇರುತ್ತದೆ. ಯೆಹೋವನ ನಂಬಿಗಸ್ತ ಸೇವಕರಾಗಲು ಮಕ್ಕಳಿಗೆ ಹೆತ್ತವರು ಸಹಾಯ ಮಾಡಬೇಕು. ಮಕ್ಕಳು ತುಂಬ ಚಿಕ್ಕವರಿರುವಾಗಲೇ ಅವರ ಹೃದಯದಲ್ಲಿ ಬೈಬಲ್ ಬೋಧನೆಗಳನ್ನು ಅಚ್ಚೊತ್ತಬೇಕು. (ಧರ್ಮೋ 6:7; ಜ್ಞಾನೋ 22:6) ಇದಕ್ಕಾಗಿ ಹೆತ್ತವರು ತುಂಬ ತ್ಯಾಗಮಾಡಬೇಕಾಗುತ್ತಾ? ಹೌದು! ತ್ಯಾಗ ಮಾಡಿದರೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ.—3ಯೋಹಾ 4.
ಯೋಸೇಫ ಮತ್ತು ಮರಿಯಳಿಂದ ಹೆತ್ತವರು ಅನೇಕ ವಿಷಯಗಳನ್ನು ಕಲಿಯಬಹುದು. ಅವರಿಗೆ “ಪ್ರತಿ ವರ್ಷ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗುವ ಪದ್ಧತಿಯಿತ್ತು.” ಅವರು ಅದಕ್ಕಾಗಿ ಸಾಕಷ್ಟು ಶ್ರಮಪಡಬೇಕಾಗಿತ್ತು, ಹಣ ಖರ್ಚು ಮಾಡಬೇಕಿತ್ತು. ಆದರೂ ಅಲ್ಲಿಗೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. (ಲೂಕ 2:41) ಯಾಕೆಂದರೆ ಅವರಿಗೆ ತಮ್ಮ ಕುಟುಂಬ ಯೆಹೋವನಿಗೆ ಹತ್ತಿರವಾಗುವುದೇ ಹೆಚ್ಚು ಮುಖ್ಯವಾಗಿತ್ತು. ಅದೇ ರೀತಿ ಇಂದು ಹೆತ್ತವರು ಅವಕಾಶ ಸಿಕ್ಕಿದಾಗೆಲ್ಲ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ನಡೆಯುವುದು ಅಂದರೆ ಏನೆಂದು ತಮ್ಮ ನಡೆನುಡಿಯ ಮೂಲಕ ಕಲಿಸಬೇಕು.—ಕೀರ್ತ 127:3-5.
ಅವರು ಒಂದು ಅವಕಾಶನೂ ಬಿಡಲಿಲ್ಲ ಎಂಬ ವಿಡಿಯೋ ನೋಡಿದ ಮೇಲೆ ಈ ಪ್ರಶ್ನೆಗಳಿಗೆ ಉತ್ತರ ಹೇಳಿ:
-
ಜಾನ್ ಮತ್ತು ಶ್ಯಾರನ್ ಶಿಲರ್ ತಮ್ಮ ಮಕ್ಕಳನ್ನು ಬೆಳೆಸುವಾಗ ಹೇಗೆ ಆಧ್ಯಾತ್ಮಿಕ ವಿಷಯಗಳಿಗೆ ಮೊದಲ ಸ್ಥಾನ ಕೊಟ್ಟರು?
-
ಹೆತ್ತವರು ತಮ್ಮ ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಯಾಕೆ ಬೇರೆ ಬೇರೆ ರೀತಿಯಲ್ಲಿ ಕಲಿಸಬೇಕು, ಮಾರ್ಗದರ್ಶಿಸಬೇಕು ಮತ್ತು ತಿದ್ದಬೇಕು?
-
ನಂಬಿಕೆಯ ಪರೀಕ್ಷೆಗಳು ಬಂದಾಗ ಮಕ್ಕಳು ಧೈರ್ಯವಾಗಿರಲು ಹೆತ್ತವರು ಅವರನ್ನು ಹೇಗೆ ತಯಾರು ಮಾಡಬಹುದು?
-
ನಿಮ್ಮ ಮಕ್ಕಳು ಯೆಹೋವನಿಗೆ ಹತ್ತಿರವಾಗಲು ಆತನ ಸಂಘಟನೆ ನೀಡಿರುವ ಯಾವ ಸಾಧನವನ್ನು ಬಳಸಿದ್ದೀರಿ?