ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೋಷಿಯಲ್‌ ನೆಟ್‌ವರ್ಕ್‌—ಅಪಾಯಗಳಿಂದ ದೂರವಿರಿ

ಸೋಷಿಯಲ್‌ ನೆಟ್‌ವರ್ಕ್‌—ಅಪಾಯಗಳಿಂದ ದೂರವಿರಿ

ಯಾಕೆ ಪ್ರಾಮುಖ್ಯ: ಸೋಷಿಯಲ್‌ ನೆಟ್‌ವರ್ಕ್‌ನಿಂದ ಸಹಾಯನೂ ಇದೆ ಅಪಾಯನೂ ಇದೆ. ಹಾಗಾಗಿ ಕೆಲವು ಕ್ರೈಸ್ತರು ಅದರ ಸಹವಾಸನೇ ಬೇಡ ಎಂದು ತೀರ್ಮಾನಿಸಿದ್ದಾರೆ. ಇನ್ನು ಕೆಲವು ಕ್ರೈಸ್ತರು ತಮ್ಮ ಬಂಧುಮಿತ್ರರ ಜೊತೆ ಸಂಪರ್ಕ ಇಟ್ಟುಕೊಳ್ಳಲು ಬಳಸುತ್ತಾರೆ. ಆದರೆ ನಾವು ಅದನ್ನು ಯದ್ವಾತದ್ವಾ ಬಳಸಬೇಕು ಎಂದು ಸೈತಾನ ಬಯಸುತ್ತಾನೆ. ಆಗ ನಮ್ಮ ಹೆಸರು ಮತ್ತು ಯೆಹೋವನ ಜೊತೆ ನಮಗಿರುವ ಸ್ನೇಹ ಎರಡೂ ಹಾಳಾಗಬಹುದು. ಯೇಸುವಿನಂತೆ ಬೈಬಲಿನಲ್ಲಿರುವ ತತ್ವಗಳನ್ನು ಬಳಸಿ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿರುವ ಅಪಾಯಗಳನ್ನು ತಿಳಿದು ದೂರ ಇರಬಹುದು.—ಲೂಕ 4:4, 8, 12.

ಯಾವ ಅಪಾಯಗಳಿಂದ ದೂರವಿರಬೇಕು?

  • ಸೋಷಿಯಲ್‌ ಮೀಡಿಯಾವನ್ನು ಅತಿಯಾಗಿ ಬಳಸುವುದು. ಸೋಷಿಯಲ್‌ ಮೀಡಿಯಾದಲ್ಲಿ ಗಂಟೆಗಟ್ಟಲೆ ಕಳೆಯುವುದರಿಂದ ಯೆಹೋವನಿಗೆ ಕೊಡಬೇಕಾದ ಅಮೂಲ್ಯ ಸಮಯವನ್ನು ಕಳೆದುಕೊಂಡುಬಿಡುತ್ತೇವೆ

    ಬೈಬಲ್‌ ತತ್ವಗಳು: ಎಫೆ 5:15, 16; ಫಿಲಿ 1:10

  • ಕೆಟ್ಟದ್ದನ್ನು ನೋಡುವುದು ಅಥವಾ ಓದುವುದು. ಲೈಂಗಿಕವಾಗಿ ಉದ್ರೇಕಿಸುವಂಥ ಚಿತ್ರಗಳನ್ನು ನೋಡುವುದರಿಂದ ಅಶ್ಲೀಲ ಚಿತ್ರಗಳನ್ನು ನೋಡುವ ಚಟಕ್ಕೆ ಅಥವಾ ಅನೈತಿಕತೆಗೆ ಬಲಿಯಾಗುತ್ತೇವೆ. ಧರ್ಮಭ್ರಷ್ಟ ಮಾಹಿತಿಯನ್ನು ಓದುವುದರಿಂದ ಅಥವಾ ಅಂಥ ಬ್ಲಾಗ್‌ಗಳನ್ನು ಬಳಸುವುದರಿಂದ ನಮ್ಮ ನಂಬಿಕೆ ಹಾಳಾಗುತ್ತದೆ

    ಬೈಬಲ್‌ ತತ್ವಗಳು: ಮತ್ತಾ 5:28; ಫಿಲಿ 4:8

  • ತಪ್ಪಾದ ಕಮೆಂಟುಗಳನ್ನು, ಅಸಭ್ಯ ಫೋಟೋಗಳನ್ನು ಹಾಕುವುದು. ನಮ್ಮ ಹೃದಯ ವಂಚಕ ಆಗಿರುವುದರಿಂದ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿ ಇಂಥ ಕಮೆಂಟುಗಳನ್ನು ಅಥವಾ ಫೋಟೋಗಳನ್ನು ಹಾಕಲು ಮನಸ್ಸಾಗಬಹುದು. ಆದರೆ ಹೀಗೆ ಮಾಡಿದರೆ ನಮ್ಮಿಂದಾಗಿ ಬೇರೆಯವರ ಹೆಸರು ಹಾಳಾಗಬಹುದು ಅಥವಾ ಅವರ ನಂಬಿಕೆ ಕಡಿಮೆಯಾಗಬಹುದು

    ಬೈಬಲ್‌ ತತ್ವಗಳು: ರೋಮ 14:13; ಎಫೆ 4:29

ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ ವಿಡಿಯೋ ನೋಡಿ, ನಂತರ ಕೆಳಗಿನ ಸನ್ನಿವೇಶಗಳಲ್ಲಿ ಏನು ಮಾಡಬೇಕು ಎಂದು ಚರ್ಚಿಸಿ: