ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ

ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ

ನಮಗೆ ಪರೀಕ್ಷೆ, ಹಿಂಸೆ ಬಂದಾಗ ಯೇಸುವಿನ ಮಾದರಿಯನ್ನು ಅನುಕರಿಸಬೇಕು. (1ಪೇತ್ರ 2:21-23) ಜನರು ಅವಮಾನ ಮಾಡಿದಾಗ ಮತ್ತು ವಿಪರೀತ ನೋವು ಅನುಭವಿಸುತ್ತಿರುವಾಗಲೂ ಆತನು ತಿರುಗಿ ಮಾತಾಡಲಿಲ್ಲ. (ಮಾರ್ಕ 15:29-32) ತಾಳಿಕೊಳ್ಳಲು ಆತನಿಗೆ ಯಾವುದು ಸಹಾಯ ಮಾಡಿತು? ಯೆಹೋವನ ಚಿತ್ತವನ್ನು ಮಾಡಲು ಆತನು ನಿರ್ಧರಿಸಿದ್ದನು. (ಯೋಹಾ 6:38) ಜೊತೆಗೆ, ‘ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದದ’ ಮೇಲೆ ಆತನ ಗಮನ ಇತ್ತು.—ಇಬ್ರಿ 12:2.

ಸತ್ಯದಿಂದಾಗಿ ಜನರು ನಮ್ಮ ಜೊತೆ ಕೆಟ್ಟದಾಗಿ ನಡಕೊಂಡರೆ ಹೇಗೆ ಪ್ರತಿಕ್ರಿಯಿಸುತ್ತೇವೆ? ನಿಜ ಕ್ರೈಸ್ತರು “ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು” ಮಾಡಲ್ಲ. (ರೋಮ 12:14, 17) ಕ್ರಿಸ್ತನು ಕಷ್ಟಗಳನ್ನು ತಾಳಿಕೊಂಡ ವಿಧವನ್ನು ನಾವು ಅನುಕರಿಸುವಾಗ ಸಂತೋಷವಾಗಿರುತ್ತೇವೆ. ಯಾಕೆಂದರೆ ದೇವರು ನಮ್ಮನ್ನು ಮೆಚ್ಚುತ್ತಾನೆ. —ಮತ್ತಾ 5:10-12; 1ಪೇತ್ರ 4:12-14.

ಯೆಹೋವನ ಹೆಸರೇ ಎಲ್ಲಕ್ಕಿಂತ ಮುಖ್ಯ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಸಹೋದರಿ ಪೊಟ್ಸಿಂಗರ್‌ ಒಬ್ಬರನ್ನೇ ಒಂದು ಸೆರೆಕೋಣೆಯಲ್ಲಿ ಹಾಕಿದ್ದಾಗ ತಮ್ಮ ಸಮಯವನ್ನು ಹೇಗೆ ಬಳಸಿದರು?

  • ಸಹೋದರ ಮತ್ತು ಸಹೋದರಿ ಪೊಟ್ಸಿಂಗರ್‌ ಬೇರೆ-ಬೇರೆ ಸೆರೆಶಿಬಿರಗಳಲ್ಲಿದ್ದಾಗ ಯಾವ ಕಷ್ಟಗಳನ್ನು ಸಹಿಸಿಕೊಂಡರು?

  • ಸಹಿಸಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡಿತು?

ಕಷ್ಟಸಂಕಟಗಳು ಬಂದಾಗ ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ