ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಗಲಾತ್ಯ 4-6

ಒಂದು “ಸಾಂಕೇತಿಕ ನಾಟಕ”

ಒಂದು “ಸಾಂಕೇತಿಕ ನಾಟಕ”

4:24-31

ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಹೊಸ ಒಡಂಬಡಿಕೆ ಶ್ರೇಷ್ಠ ಎಂದು ತೋರಿಸಲು ಅಪೊಸ್ತಲ ಪೌಲನು ಈ ‘ಸಾಂಕೇತಿಕ ನಾಟಕವನ್ನು’ ಹೇಳಿದನು. ಕ್ರಿಸ್ತನು ಮತ್ತು ಆತನ ಬಾಧ್ಯಸ್ಥರು ಆಡಳಿತ ನಡೆಸುವಾಗ ಎಲ್ಲ ಮಾನವರು ಪಾಪ, ಅಪರಿಪೂರ್ಣತೆ, ದುಃಖ, ಮರಣ ಯಾವುದೂ ಇಲ್ಲದೆ ಜೀವಿಸುತ್ತಾರೆ.—ಯೆಶಾ 25:8, 9.

 

ಸೇವಕಿಯಾದ ಹಾಗರ್‌

ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿದ್ದ ಇಸ್ರಾಯೇಲ್‌. ಯೆರೂಸಲೇಮ್‌ ಅದರ ರಾಜಧಾನಿ ಆಗಿತ್ತು

ಸ್ವತಂತ್ರ ಸ್ತ್ರೀಯಾದ ಸಾರ

ಮೇಲಣ ಯೆರೂಸಲೇಮ್‌. ಇದು ದೇವರ ಸಂಘಟನೆಯ ಸ್ವರ್ಗೀಯ ಭಾಗ ಆಗಿದೆ

ಹಾಗರಳ ‘ಮಕ್ಕಳು’

ಯೇಸುವನ್ನು ಹಿಂಸಿಸಿ, ತಿರಸ್ಕರಿಸಿದ ಯೆಹೂದ್ಯರು. ಇವರು ಧರ್ಮಶಾಸ್ತ್ರವನ್ನು ಪಾಲಿಸುತ್ತೇವೆ ಎಂದು ಮಾತುಕೊಟ್ಟಿದ್ದರು

ಸಾರಳ ‘ಮಕ್ಕಳು’

ಯೇಸು ಕ್ರಿಸ್ತ ಮತ್ತು 1,44,000 ಅಭಿಷಿಕ್ತ ಕ್ರೈಸ್ತರು

ಧರ್ಮಶಾಸ್ತ್ರದ ಒಡಂಬಡಿಕೆಗೆ ದಾಸರು

ಆಗಿನ ಇಸ್ರಾಯೇಲ್ಯರು. ಅವರು ಪಾಪದ ದಾಸತ್ವದಲ್ಲಿ ಇದ್ದಾರೆಂದು ಧರ್ಮಶಾಸ್ತ್ರ ನೆನಪಿಸುತ್ತಿತ್ತು

ಹೊಸ ಒಡಂಬಡಿಕೆ ಬಿಡುಗಡೆ ತರುತ್ತದೆ

ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಟ್ಟರೆ ಪಾಪದಿಂದ ಬಿಡುಗಡೆ ಸಿಗುತ್ತದೆ