ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ

ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ

ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಬೇಕು. ಯಾಕೆ? ಯಾಕೆಂದರೆ ನೀವು ಆರಿಸಿಕೊಳ್ಳುವ ಚಲನಚಿತ್ರ, ಗೀತೆ, ವೆಬ್‌ಸೈಟ್‌, ಪುಸ್ತಕ, ವಿಡಿಯೋ ಗೇಮ್‌ ಮೊದಲು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತದೆ. ಆಮೇಲೆ ಅದು ನಿಮ್ಮ ನಡತೆಯನ್ನು ಪ್ರಭಾವಿಸುತ್ತದೆ. ಇವತ್ತಿನ ಹೆಚ್ಚಿನ ಮನೋರಂಜನೆಯಲ್ಲಿ ಯೆಹೋವನಿಗೆ ಸ್ವಲ್ಪನೂ ಇಷ್ಟ ಇಲ್ಲದಿರುವ ವಿಷಯಗಳೇ ತುಂಬಿರುತ್ತದೆ. (ಕೀರ್ತ 11:5; ಗಲಾ 5:19-21) ಹಾಗಾಗಿ ಯೆಹೋವನಿಗೆ ಇಷ್ಟ ಆಗುವಂಥ ವಿಷಯಗಳನ್ನೇ ಆರಿಸಿಕೊಳ್ಳಬೇಕು ಎಂದು ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಫಿಲಿ 4:8.

  • ಎಂಥ ಮನರಂಜನೆಯನ್ನು ನಾನು ಆರಿಸಿಕೊಳ್ಳಬೇಕು? ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ: ಇಂದಿರುವ ಕೆಲವು ಮನೋರಂಜನೆ ಹೇಗೆ ಅಂದಿನ ರೋಮಿನ ಕತ್ತಿಮಲ್ಲರ ಆಟಗಳ ತರ ಇದೆ?

  • ಮನೋರಂಜನೆಯನ್ನು ಜಾಣ್ಮೆಯಿಂದ ಆಯ್ಕೆ ಮಾಡಲು ಸಭೆಯವರು ತಮಗಿಂತ ಚಿಕ್ಕವರಿಗೆ ಹೇಗೆ ಸಹಾಯ ಮಾಡಬಹುದು?

  • ಮನೋರಂಜನೆ ವಿಷಯದಲ್ಲಿ ರೋಮನ್ನರಿಗೆ 12:9 ನ್ನು ಹೇಗೆ ಅನ್ವಯಿಸಿಕೊಳ್ಳಬೇಕು?

  • ನೀವು ಇರುವ ಸ್ಥಳದಲ್ಲಿ ಯಾವ ಒಳ್ಳೇ ಮನೋರಂಜನೆ ಇದೆ?