ನಮ್ಮ ಕ್ರೈಸ್ತ ಜೀವನ
ವೈಯಕ್ತಿಕ ಅಧ್ಯಯನದಿಂದ ಹೆಚ್ಚು ಪ್ರಯೋಜನ ಪಡೆಯಿರಿ
ಯಾಕೆ ಪ್ರಾಮುಖ್ಯ: ದೇವರ ವಾಕ್ಯವನ್ನು ನಾವು ವೈಯಕ್ತಿಕವಾಗಿ ಅಧ್ಯಯನ ಮಾಡಿದರೆ ಸತ್ಯದ “ಅಗಲ ಉದ್ದ ಎತ್ತರ ಮತ್ತು ಆಳವು ಎಷ್ಟೆಂಬುದನ್ನು ಕೂಲಂಕಷವಾಗಿ ಗ್ರಹಿಸಲು” ಸಾಧ್ಯ ಆಗುತ್ತದೆ. (ಎಫೆ 3:18) ಈ ದುಷ್ಟ ಲೋಕದಲ್ಲಿ ನಿರ್ದೋಷಿಗಳಾಗಿರಲು ಮತ್ತು ನಿಷ್ಕಳಂಕರಾಗಿರಲು ಸಹ ಸಹಾಯ ಸಿಗುತ್ತದೆ. ‘ಜೀವದ ವಾಕ್ಯವನ್ನು ಬಿಗಿಯಾಗಿ ಹಿಡುಕೊಳ್ಳಲು’ ಆಗುತ್ತದೆ. (ಫಿಲಿ 2:15, 16) ವೈಯಕ್ತಿಕ ಅಧ್ಯಯನ ಮಾಡುವಾಗ ನಾವು ನಮಗೆ ವೈಯಕ್ತಿಕವಾಗಿ ಬೇಕಾಗಿರುವ ಮಾಹಿತಿಯನ್ನು ಆರಿಸಿಕೊಂಡು ಅಧ್ಯಯನ ಮಾಡಬಹುದು. ಬೈಬಲನ್ನು ಓದಿ ಅಧ್ಯಯನ ಮಾಡುವುದರಿಂದ ಪೂರ್ತಿ ಪ್ರಯೋಜನ ಪಡೆಯಲು ಏನು ಮಾಡಬೇಕು?
ಹೇಗೆ ಮಾಡಬೇಕು:
-
ನೀವು ಅಧ್ಯಯನ ಮಾಡಲು ಉಪಯೋಗಿಸುವ ಬೈಬಲಲ್ಲಿ (ಮುದ್ರಿತ ಅಥವಾ ಎಲೆಕ್ಟ್ರಾನಿಕ್) ವಚನಗಳಿಗೆ ಗುರುತು ಹಾಕಿ ಮತ್ತು ಟಿಪ್ಪಣಿ ಬರಕೊಳ್ಳಿ
-
ಬೈಬಲ್ ಓದುವಾಗ ‘ಯಾರು? ಯಾವುದು? ಯಾವಾಗ? ಎಲ್ಲಿ? ಯಾಕೆ? ಹೇಗೆ?’ ಎಂದು ಯೋಚಿಸಿ
-
ಮಾಹಿತಿಯನ್ನು ಕಲೆಹಾಕಿ. ಲಭ್ಯವಿರುವ ಸಂಶೋಧನಾ ಸಾಧನಗಳನ್ನು ಉಪಯೋಗಿಸುತ್ತಾ, ವಿಷಯ ಅಥವಾ ವಚನದ ಮೇಲೆ ಆಧರಿಸಿ ಹುಡುಕಿ
-
ಓದಿದ ಮಾಹಿತಿಯಲ್ಲಿ ನಿಮಗೇನು ಪಾಠ ಇದೆ ಎಂದು ತಿಳಿಯಲು ಧ್ಯಾನಿಸಿ
-
ನೀವೇನು ಕಲೀತೀರೋ ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಿ.—ಲೂಕ 6:47, 48
ಒಳ್ಳೇ ವೈಯಕ್ತಿಕ ಅಧ್ಯಯನದ ಮೂಲಕ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ವೈಯಕ್ತಿಕ ಅಧ್ಯಯನದ ಬಗ್ಗೆ ಕೆಲವರು ಏನು ಹೇಳುತ್ತಾರೆ?
-
ನಾವು ಪ್ರತಿ ಸಾರಿ ವೈಯಕ್ತಿಕ ಅಧ್ಯಯನ ಮಾಡಲು ಕೂತಾಗ ಯಾಕೆ ಪ್ರಾರ್ಥನೆ ಮಾಡಬೇಕು?
-
ಬೈಬಲಿನ ಒಂದು ಭಾಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ?
-
ನಾವು ಅಧ್ಯಯನ ಮಾಡುವ ಬೈಬಲಿನಲ್ಲಿ ಯಾವ ತರದ ಗುರುತುಗಳನ್ನು ಹಾಕಬಹುದು?
-
ಬೈಬಲನ್ನು ಅಧ್ಯಯನ ಮಾಡುವಾಗ ಧ್ಯಾನಿಸುವುದು ಯಾಕೆ ಅಷ್ಟು ಮುಖ್ಯ?
-
ನಾವು ಕಲಿಯುವ ವಿಷಯಗಳನ್ನು ಏನು ಮಾಡಬೇಕು?