ನಮ್ಮ ಕ್ರೈಸ್ತ ಜೀವನ
ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರೋರಿಂದ ಕಲಿಯಿರಿ!
ನಿಮ್ಮ ಸಭೆಗಳಲ್ಲಿ ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರೋ ಸಹೋದರ ಸಹೋದರಿಯರು ಇದ್ದಾರ? ಅವರಿಂದ ನಮಗೆ ತುಂಬಾ ಪ್ರಯೋಜನ ಇದೆ. ಹೇಗೆ? ಯೆಹೋವನ ಮೇಲೆ ಆತುಕೊಳ್ಳೋದು ಹೇಗೆ ಅಂತ ಅವರಿಂದ ಕಲೀಬಹುದು. ಯೆಹೋವನ ಸಂಘಟನೆಯ ಇತಿಹಾಸದ ಬಗ್ಗೆ ತಿಳುಕೊಳ್ಳಬಹುದು. ಜೊತೆಗೆ ಅವರು ಜೀವನದಲ್ಲಿ ಬಂದ ಸಮಸ್ಯೆಗಳನ್ನ ಯೆಹೋವನ ಸಹಾಯದಿಂದ ಹೇಗೆ ತಾಳಿಕೊಂಡರು ಅಂತ ತಿಳುಕೊಂಡ್ರೆ ನಮಗೂ ಸಹಾಯ ಆಗುತ್ತೆ. ಅಷ್ಟೇ ಅಲ್ಲ ಅವರನ್ನ ನಮ್ಮ ಕುಟುಂಬ ಆರಾಧನೆಗೆ ಕರೆದು ಅನುಭವ ಕೇಳಿ ಪ್ರೋತ್ಸಾಹ ಪಡೀಬಹುದು.
ಒಂದುವೇಳೆ ನೀವು ತುಂಬಾ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಾ ಇರೋದಾದ್ರೆ ನಿಮ್ಮ ಅನುಭವಗಳನ್ನ ಯೌವನಸ್ಥರೊಂದಿಗೆ ಹಂಚಿಕೊಳ್ಳಿ. ಇದನ್ನ ಯಾಕೋಬ ಮತ್ತು ಯೋಸೇಫ ಸಹ ಮಾಡಿದರು. (ಆದಿ 48:21, 22; 50:24, 25) ಯೆಹೋವನು ಕೂಡ ತನ್ನ ಮಹಾ ಕಾರ್ಯಗಳ ಬಗ್ಗೆ ತಂದೆಯಂದಿರು ಮಕ್ಕಳಿಗೆ ಕಲಿಸಬೇಕು ಅಂತ ಬಯಸಿದನು. (ಧರ್ಮೋ 4:9, 10; ಕೀರ್ತ 78:4-7) ಇಂದು ಸಹ ಯೆಹೋವನು ತನ್ನ ಸಂಘಟನೆಯ ಮೂಲಕ ಮಾಡಿರುವ ಎಲ್ಲಾ ಒಳ್ಳೇ ವಿಷಯಗಳ ಬಗ್ಗೆ ಹೆತ್ತವರು ಮತ್ತು ಸಭೆಯಲ್ಲಿರುವ ಬೇರೆಯವರು ಚಿಕ್ಕವರಿಗೆ ತಿಳಿಸಬಹುದು.
ನಿಷೇಧದ ಮಧ್ಯೆ ಐಕ್ಯತೆ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ನಿಷೇಧ ಇದ್ದ ದೇಶಗಳಲ್ಲಿರೋ ಸಹೋದರರಿಗೆ ಆಸ್ಟ್ರಿಯದ ಬ್ರಾಂಚ್ ಹೇಗೆ ಸಹಾಯ ಮಾಡಿತು?
-
ಆ ದೇಶಗಳಲ್ಲಿ ಇದ್ದ ಸಹೋದರರು ನಿಷೇಧದ ಮಧ್ಯದಲ್ಲೂ ಯೆಹೋವನ ಜೊತೆ ಇದ್ದ ತಮ್ಮ ಸಂಬಂಧನಾ ಹೇಗೆ ಕಾಪಾಡಿಕೊಂಡರು?
-
ರೊಮೇನಿಯದ ಅನೇಕ ಪ್ರಚಾರಕರು ಯೆಹೋವನ ಸಂಘಟನೆನಾ ಯಾಕೆ ಬಿಟ್ಟು ಹೋದರು? ಮತ್ತು ಅವರು ಹೇಗೆ ವಾಪಸ್ ಬಂದರು?
-
ಇಂಥ ಅನುಭವಗಳು ನಮ್ಮ ನಂಬಿಕೆನಾ ಹೇಗೆ ಬಲಪಡಿಸುತ್ತವೆ?