ಚಿಲಿಯಲ್ಲಿ ನಡೆಯುತ್ತಿರುವ ಬೈಬಲ್‌ ಅಧ್ಯಯನ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಡಿಸೆಂಬರ್ 2016

ಮಾದರಿ ನಿರೂಪಣೆಗಳು

ಕರಪತ್ರ T-31 ಮತ್ತು ಕಷ್ಟಗಳ ಕಾರಣವೇನೆಂದು ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

‘ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ’

ಯೆಹೋವನ ಜನರು ಶಾಂತಿಯನ್ನು ಬೆನ್ನಟ್ಟುವರು ಎಂದು ತಿಳಿಸಲು ಪ್ರವಾದಿ ಯೆಶಾಯನು ಶಸ್ತ್ರಾಸ್ತ್ರಗಳು ವ್ಯವಸಾಯದ ಸಾಧನಗಳಾಗಿ ಬದಲಾಗುವುದನ್ನು ವರ್ಣಿಸಿದನು. (ಯೆಶಾಯ 2:4)

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದಿಂದ ಹೃದಯ ತಲುಪುವಂತೆ ಕಲಿಸಿ

ದಿನನಿತ್ಯದ ಜೀವನಕ್ಕೆ ದೇವರ ತತ್ವಗಳು ಹೇಗೆ ಅನ್ವಯಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ‘ದೇವರ ಪ್ರೀತಿ’ ಪುಸ್ತಕ ತಿಳಿಸುತ್ತದೆ.

ಬೈಬಲಿನಲ್ಲಿರುವ ರತ್ನಗಳು

ಮೆಸ್ಸೀಯ—ನೆರವೇರಿದ ಪ್ರವಾದನೆ

ಮೆಸ್ಸೀಯನು ಗಲಿಲಾಯದಲ್ಲೆಲ್ಲಾ ಸಾರುತ್ತಾನೆ ಎಂದು ಪ್ರವಾದಿ ಯೆಶಾಯನು ಪ್ರವಾದಿಸಿದ್ದನು. ಗಲಿಲಾಯಕ್ಕೆ ಹೋಗಿ ಸುವಾರ್ತೆಯನ್ನು ಸಾರುವ ಮೂಲಕ ಯೇಸು ಆ ಪ್ರವಾದನೆಯನ್ನು ನೆರವೇರಿಸಿದನು.

ನಮ್ಮ ಕ್ರೈಸ್ತ ಜೀವನ

“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

ಯೆಶಾಯನ ಸಿದ್ಧಮನಸ್ಸು ಮತ್ತು ನಂಬಿಕೆಯನು ನಾವು ಹೇಗೆ ಅನುಕರಿಸಬಲ್ಲೆವು? ಅಗತ್ಯವಿರುವಲ್ಲಿ ಸೇವೆ ಮಾಡಲಿಕ್ಕಾಗಿ ಸ್ಥಳಾಂತರಿಸಿದ ಕುಟುಂಬದ ಅನುಭವದಿಂದ ಕಲಿಯಿರಿ.

ಬೈಬಲಿನಲ್ಲಿರುವ ರತ್ನಗಳು

ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು

ಪರದೈಸಿನ ಬಗ್ಗೆ ಯೆಶಾಯನ ಪ್ರವಾದನೆಯು ಹಿಂದೆ ಹೇಗೆ ನೆರವೇರಿದೆ, ಈಗ ಹೇಗೆ ನೆರವೇರುತ್ತಿದೆ ಮತ್ತು ಮುಂದೆ ಹೇಗೆ ನೆರವೇರಲಿದೆ?

ನಮ್ಮ ಕ್ರೈಸ್ತ ಜೀವನ

ದೈವಿಕ ಶಿಕ್ಷಣ ಪೂರ್ವಗ್ರಹವನ್ನು ಜಯಿಸುತ್ತದೆ

ಮುಂಚೆ ಬದ್ಧ ವೈರಿಗಳಾಗಿದ್ದ ಇಬ್ಬರು ಆಧ್ಯಾತ್ಮಿಕ ಸಹೋದರರಾಗಿದ್ದು ದೈವಿಕ ಶಿಕ್ಷಣಕ್ಕೆ ಒಂದಾಗಿಸುವ ಶಕ್ತಿ ಇದೆ ಎನ್ನಲು ಪುರಾವೆ.

ಬೈಬಲಿನಲ್ಲಿರುವ ರತ್ನಗಳು

ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ

ಶೆಬ್ನನು ತನ್ನ ಅಧಿಕಾರವನ್ನು ಹೇಗೆ ಉಪಯೋಗಿಸಿದ್ದನು? ಯೆಹೋವನು ಅವನ ಸ್ಥಾನಕ್ಕೆ ಎಲ್ಯಾಕೀಮನನ್ನು ಏಕೆ ನೇಮಿಸಿದನು?