ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದಿಂದ ಹೃದಯ ತಲುಪುವಂತೆ ಕಲಿಸಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದಿಂದ ಹೃದಯ ತಲುಪುವಂತೆ ಕಲಿಸಿ

ಏಕೆ ಪ್ರಾಮುಖ್ಯ: ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಆರಾಧಿಸಬೇಕಾದರೆ ಜನರು ಆತನ ಮಟ್ಟಗಳನ್ನು ಕಲಿತು, ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸಬೇಕು. (ಯೆಶಾ 2:3, 4)“ದೇವರ ಪ್ರೀತಿ” ಎಂಬ ಬೈಬಲ್‌ ಅಧ್ಯಯನದ ಎರಡನೇ ಪುಸ್ತಕವು ದಿನನಿತ್ಯದ ಜೀವನದಲ್ಲಿ ಬೈಬಲ್‌ ತತ್ವಗಳನ್ನು ಹೇಗೆ ಅನ್ವಯಿಸಬಹುದೆಂದು ತೋರಿಸುತ್ತದೆ. (ಇಬ್ರಿ 5:14) ಅಧ್ಯಯನ ಮಾಡುವಾಗ ನಾವು ವಿದ್ಯಾರ್ಥಿಗಳ ಹೃದಯ ತಲುಪಲೇಬೇಕು, ಆಗ ಮಾತ್ರ ಅವರು ಕಲಿತ ವಿಷಯಗಳಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.—ರೋಮ 6:17.

ಹೇಗೆ ಮಾಡುವುದು:

  • ನಿಮ್ಮ ವಿದ್ಯಾರ್ಥಿಯ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟು ತಯಾರಿಸಿ. ಚರ್ಚಿಸುತ್ತಿರುವ ವಿಷಯದ ಬಗ್ಗೆ ಅವನಿಗೆ ಹೇಗನಿಸುತ್ತಿದೆ, ಅವನ ಭಾವನೆಗಳೇನು ಎಂದು ತಿಳಿಯಲು ದೃಷ್ಟಿಕೋನ ಪ್ರಶ್ನೆಯನ್ನು ತಯಾರಿಸಿ.—ಜ್ಞಾನೋ 20:5; ಶುಶ್ರೂಷಾ ಶಾಲೆ ಪು. 259

  • ಪುಸ್ತಕದಲ್ಲಿರುವ ಎಲ್ಲ ಚೌಕಗಳನ್ನು ಉಪಯೋಗಿಸಿ. ಆಗ ವಿದ್ಯಾರ್ಥಿಗೆ ಬೈಬಲ್‌ ತತ್ವಗಳನ್ನು ಅನ್ವಯಿಸುವುದರ ಮಹತ್ವ ತಿಳಿದುಬರುವುದು

  • ಮನಸ್ಸಾಕ್ಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸರಿಯಾಗಿ ಯೋಚಿಸಲು ವಿದ್ಯಾರ್ಥಿಗೆ ಸಹಾಯಮಾಡಿ, ಆದರೆ ಅವನಿಗೋಸ್ಕರ ನೀವೇ ನಿರ್ಣಯ ಮಾಡಬೇಡಿ.—ಗಲಾ 6:5

  • ಬೈಬಲಿನ ಯಾವುದಾದರೂ ತತ್ವಗಳನ್ನು ಅನ್ವಯಿಸಲು ವಿದ್ಯಾರ್ಥಿಗೆ ಸಹಾಯ ಬೇಕಾಗಿದ್ದಲ್ಲಿ ವಿವೇಚನೆಯಿಂದ ತಿಳಿದುಕೊಳ್ಳಿ. ಯೆಹೋವನ ಮೇಲಿನ ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟು ಬದಲಾವಣೆ ಮಾಡಿಕೊಳ್ಳುವಂತೆ ಅವನನ್ನು ಪ್ರೋತ್ಸಾಹಿಸಿ.—ಜ್ಞಾನೋ 27:11; ಯೋಹಾ 14:31