ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 1-5

‘ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ’

‘ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ’

2:2, 3

“ಅಂತ್ಯಕಾಲದಲ್ಲಿ”

ನಾವು ಜೀವಿಸುತ್ತಿರುವ ಈ ಕಾಲ

“ಯೆಹೋವನ ಮಂದಿರದ ಬೆಟ್ಟ”

ಯೆಹೋವನ ಉನ್ನತಮಟ್ಟದ ಸತ್ಯಾರಾಧನೆ

“ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು”

ಐಕ್ಯತೆಯಿಂದ ಸತ್ಯಾರಾಧನೆಯನ್ನು ಮಾಡಲು ಸೇರಿ ಬರುವವರು

“ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ”

ಸತ್ಯಾರಾಧಕರು ತಮ್ಮೊಂದಿಗೆ ಸೇರಲು ಬೇರೆಯವರನ್ನು ಕರೆಯುತ್ತಾರೆ

“ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು”

ತನ್ನ ವಾಕ್ಯದ ಮೂಲಕ ಯೆಹೋವನು ನಮಗೆ ಬೋಧಿಸುತ್ತಾನೆ ಮತ್ತು ಆತನ ಮಾರ್ಗದಲ್ಲಿ ನಡೆಯಲು ಸಹಾಯ ಮಾಡುತ್ತಾನೆ

2:4

“ಯುದ್ಧಾಭ್ಯಾಸವು ನಡೆಯುವುದೇ ಇಲ್ಲ”

ಯುದ್ಧದ ಆಯುಧಗಳನ್ನು ವ್ಯವಸಾಯದ ಉಪಕರಣಗಳನ್ನಾಗಿ ಬದಲಾಯಿಸುವುದನ್ನು ಯೆಶಾಯ ವರ್ಣಿಸಿದ್ದಾನೆ. ಹೀಗೆ ದೇವಜನರು ಶಾಂತಿಯಿಂದ ಇರುತ್ತಾರೆಂದು ತೋರಿಸಿದ್ದಾನೆ. ಯೆಶಾಯನ ದಿನಗಳಲ್ಲಿ ಈ ಉಪಕರಣಗಳನ್ನು ಹೇಗೆ ಉಪಯೋಗಿಸುತ್ತಿದ್ದರು?

“ಕತ್ತಿಗಳನ್ನು ಗುಳಗಳನ್ನಾಗಿ”

1 ಗುಳ ನೆಲದ ಮೇಲ್ಮೈಯನ್ನು ಅಗೆಯುವ ಉಪಕರಣವಾಗಿತ್ತು. ಕೆಲವನ್ನು ಲೋಹದಿಂದ ಮಾಡುತ್ತಿದ್ದರು.—1ಸಮು 13:20

“ಬರ್ಜಿಗಳನ್ನು ಕುಡುಗೋಲುಗಳನ್ನಾಗಿ”

2 ಕುಡುಗೋಲು ಎನ್ನುವುದು ಅರ್ಧ ಗೋಳಾಕಾರದ ಲೋಹದ ಕತ್ತಿ. ಇದಕ್ಕೊಂದು ಹಿಡಿ ಇರುತ್ತಿತ್ತು. ದ್ರಾಕ್ಷಾಗಿಡಗಳನ್ನು ಕತ್ತರಿಸಲು ಇವುಗಳನ್ನು ಉಪಯೋಗಿಸುತ್ತಿದ್ದರು.—ಯೆಶಾ 18:5