ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

ಸಿದ್ಧಮನಸ್ಸು ತೋರಿಸುವುದರಲ್ಲಿ ಯೆಶಾಯನು ಉತ್ತಮ ಮಾದರಿ ಇಟ್ಟಿದ್ದಾನೆ. ಅಗತ್ಯವಿದ್ದ ಕೆಲಸ ಮಾಡಲು ಅವನು ತಕ್ಷಣವೇ ಒಪ್ಪಿಕೊಂಡ. ಅದರಲ್ಲೂ ಆ ಕೆಲಸದ ಬಗ್ಗೆ ಪೂರ್ತಿ ಗೊತ್ತಿಲ್ಲದೇ ಇದ್ದರೂ ಅದನ್ನು ಒಪ್ಪಿಕೊಂಡ. ಎಂಥ ನಂಬಿಕೆ! (ಯೆಶಾ 6:8) ರಾಜ್ಯ ಪ್ರಚಾರಕರ ಅಗತ್ಯ ತುಂಬಾ ಇರುವ ಸ್ಥಳಕ್ಕೆ ಹೋಗಲು ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳುತ್ತೀರಾ? (ಕೀರ್ತ 110:3) ಈ ರೀತಿಯ ನಿರ್ಧಾರ ಮಾಡುವಾಗ ‘ಸಾಕಾಗುವಷ್ಟು ಹಣ ನನ್ನಲ್ಲಿದೆಯಾ?’ ಎಂದು ಲೆಕ್ಕ ಹಾಕಬೇಕು. (ಲೂಕ 14:27, 28) ಸಾರುವ ಕೆಲಸಕ್ಕಾಗಿ ತ್ಯಾಗ ಮಾಡಲು ಮನಸ್ಸು ಮಾಡಿ. (ಮತ್ತಾ 8:20; ಮಾರ್ಕ 10:28-30) ಅಗತ್ಯ ಇರುವಲ್ಲಿ ಸೇವೆ ಮಾಡಲು ಮುಂದೆ ಬನ್ನಿ ವಿಡಿಯೋದಲ್ಲಿ ತೋರಿಸಿದಂತೆ ಯೆಹೋವನ ಸೇವೆಯಲ್ಲಿ ನಮಗೆ ಸಿಗುವ ಆಶೀರ್ವಾದಕ್ಕೆ ಹೋಲಿಸುವಾಗ ನಾವು ಮಾಡುವ ತ್ಯಾಗಗಳು ಏನೇನೂ ಅಲ್ಲ.

ವಿಡಿಯೋ ನೋಡಿದ ನಂತರ, ಮುಂದಿನ ಪ್ರಶ್ನೆಗಳನ್ನು ಕೇಳಿ:

  • ಎಕ್ವಾಡಾರ್‌ನಲ್ಲಿ ಸೇವೆ ಮಾಡಲು ವಿಲಿಯಮ್ಸ್‌ ಕುಟುಂಬ ಯಾವ ತ್ಯಾಗಗಳನ್ನು ಮಾಡಿತು?

  • ಎಲ್ಲಿ ಸೇವೆ ಮಾಡಬೇಕು ಎಂದು ನಿರ್ಧರಿಸುವಾಗ ಅವರು ಯಾವ ಅಂಶಗಳ ಬಗ್ಗೆ ಯೋಚಿಸಿದರು?

  • ಯಾವ ಆಶೀರ್ವಾದಗಳನ್ನು ಪಡೆದುಕೊಂಡರು?

  • ಅಗತ್ಯವಿರುವ ಕಡೆ ಹೋಗಿ ಸೇವೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಎಲ್ಲಿ ಕಂಡುಕೊಳ್ಳಬಲ್ಲಿರಿ?

ನಿಮ್ಮ ಮುಂದಿನ ಕುಟುಂಬ ಆರಾಧನೆಯಲ್ಲಿ, ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:

  • ಕುಟುಂಬವಾಗಿ ನಮ್ಮ ಸೇವೆಯನ್ನು ಹೇಗೆ ಹೆಚ್ಚು ಮಾಡಬಹುದು? (ನಮ್ಮ ರಾಜ್ಯ ಸೇವೆ 8/11 ಪು. 4-6)

  • ಅಗತ್ಯವಿರುವ ಕಡೆ ಹೋಗಿ ಸೇವೆ ಮಾಡಲು ಆಗದಿದ್ದರೆ ನೀವು ಈಗಿರುವ ಸಭೆಯಲ್ಲೇ ಯಾವೆಲ್ಲ ವಿಧಗಳಲ್ಲಿ ಸಹಾಯ ಮಾಡಬಲ್ಲಿರಿ? (ಕಾವಲಿನಬುರುಜು 16.03 ಪು. 23-25)