ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ದೈವಿಕ ಶಿಕ್ಷಣ ಪೂರ್ವಗ್ರಹವನ್ನು ಜಯಿಸುತ್ತದೆ

ದೈವಿಕ ಶಿಕ್ಷಣ ಪೂರ್ವಗ್ರಹವನ್ನು ಜಯಿಸುತ್ತದೆ

ಯೆಹೋವನು ನಿಷ್ಪಕ್ಷಪಾತಿ ದೇವರು. (ಅಕಾ 10:34, 35) ಆತನು ‘ಎಲ್ಲ ಜನಾಂಗ, ಕುಲ, ಪ್ರಜೆ ಮತ್ತು ಭಾಷೆಗಳ ಜನರನ್ನು’ ತನ್ನವರನ್ನಾಗಿ ಸ್ವೀಕರಿಸುತ್ತಾನೆ. (ಪ್ರಕ 7:9) ಆದ್ದರಿಂದ, ಕ್ರೈಸ್ತ ಸಭೆಯಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂಥ ತಾರತಮ್ಯ ಇಲ್ಲ. (ಯಾಕೋ 2:1-4) ಮನುಷ್ಯರ ವ್ಯಕ್ತಿತ್ವಗಳನ್ನು ಹೀಗೆ ಬದಲಾಯಿಸುತ್ತಾ ಆಧ್ಯಾತ್ಮಿಕ ಪರದೈಸನ್ನು ಸೃಷ್ಟಿಸುತ್ತಿರುವ ದೈವಿಕ ಶಿಕ್ಷಣಕ್ಕಾಗಿ ನಾವು ಯೆಹೋವನಿಗೆ ಯಾವಾಗಲೂ ಕೃತಜ್ಞರು. (ಯೆಶಾ 11:6-9) ಪೂರ್ವಗ್ರಹದ ಸುಳಿವು ಸಹ ನಮ್ಮಲ್ಲಿರದಂತೆ ನಾವು ಯಥಾರ್ಥ ಪ್ರಯತ್ನ ಹಾಕುವಾಗ ನಮ್ಮ ದೇವರನ್ನು ಅನುಕರಿಸುತ್ತೇವೆ.—ಎಫೆ 5:1, 2.

ಜಾನಿ ಮತ್ತು ಗಿಡ್ಯನ್‌: ಬದ್ಧ ವೈರಿಗಳು ಆಪ್ತ ಸಹೋದರರಾದರು ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:

  • ಭೇದಭಾವ ಮತ್ತು ಪೂರ್ವಗ್ರಹ ತೆಗೆದುಹಾಕಲು ಮನುಷ್ಯರು ಮಾಡುವ ಪ್ರಯತ್ನಕ್ಕಿಂತ ದೈವಿಕ ಶಿಕ್ಷಣ ಏಕೆ ಹೆಚ್ಚು ಉನ್ನತವಾಗಿದೆ?

  • ನಮ್ಮ ಲೋಕವ್ಯಾಪಕ ಸಹೋದರತ್ವದಲ್ಲಿ ನಿಮಗೆ ಹೆಚ್ಚು ಇಷ್ಟವಾಗುವ ವಿಷಯ ಯಾವುದು?

  • ನಾವು ಕ್ರೈಸ್ತ ಐಕ್ಯತೆಯನ್ನು ಕಾಪಾಡಿಕೊಂಡರೆ ಅದು ಯೆಹೋವನಿಗೆ ಹೇಗೆ ಮಹಿಮೆ ತರುತ್ತದೆ?