ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನು ಗೀತೆಗಳ ಮೂಲಕ ಹಾಡಿ ಹೊಗಳಿ

ಯೆಹೋವನನ್ನು ಗೀತೆಗಳ ಮೂಲಕ ಹಾಡಿ ಹೊಗಳಿ

ಪೌಲ-ಸೀಲರು ಜೈಲಲ್ಲಿ ಹಾಡುತ್ತಾ ಯೆಹೋವನನ್ನು ಸ್ತುತಿಸಿದರು. (ಅಕಾ 16:25) ಹೀಗೆ ಅವರಿಗೆ ಕಷ್ಟವನ್ನು ತಾಳಿಕೊಳ್ಳಲು ಬಲ ಸಿಕ್ಕಿತು. ನಾವೇನು ಮಾಡಬೇಕು? ನಮ್ಮ ಗೀತೆ ಪುಸ್ತಕದಲ್ಲಿರುವ ಹಾಡುಗಳು ಮತ್ತು JW ಪ್ರಸಾರದಲ್ಲಿ ಬರುವ ಹಾಡುಗಳಿಂದ ನಾವು ಪ್ರೋತ್ಸಾಹ ಪಡೆಯುತ್ತೇವೆ. ಕಷ್ಟ ಬಂದಾಗ ನಂಬಿಗಸ್ತರಾಗಿರಲು ಅವು ಸಹಾಯ ಮಾಡುತ್ತವೆ. ಎಲ್ಲದಕ್ಕಿಂತ ಮುಖ್ಯವಾಗಿ ಗೀತೆ ಹಾಡುವಾಗ ನಾವು ಯೆಹೋವನನ್ನು ಸ್ತುತಿಸುತ್ತೇವೆ. (ಕೀರ್ತ 28:7) ಕೆಲವು ಗೀತೆಗಳನ್ನಾದರೂ ಬಾಯಿಪಾಠ ಮಾಡುವಂತೆ ನಮ್ಮನ್ನು ಉತ್ತೇಜಿಸಲಾಗಿತ್ತು. ಇದನ್ನು ಮಾಡಕ್ಕಾಯಿತಾ? ಕುಟುಂಬ ಆರಾಧನೆಯಲ್ಲಿ ಗೀತೆಗಳನ್ನು ಹಾಡಿ ಅಭ್ಯಾಸ ಮಾಡಬಹುದು ಮತ್ತು ಬಾಯಿಪಾಠ ಮಾಡಬಹುದು.

ಮಕ್ಕಳ ಬಾಯಲ್ಲಿ ಯೆಹೋವನಿಗೆ ಮಧುರ ಗಾಯನ ಎಂಬ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ರಾಜ್ಯ ಗೀತೆಗಳನ್ನು ಹಾಡುವುದರಿಂದ ನಮ್ಮ ಮೇಲೆ ಯಾವ ಒಳ್ಳೇ ಪ್ರಭಾವ ಆಗುತ್ತದೆ?

  • ಗೀತೆಗಳನ್ನು ರೆಕಾರ್ಡ್‌ ಮಾಡಲು ಆಡಿಯೋ/ವಿಡಿಯೋ ವಿಭಾಗಗಳು ಯಾವ ತಯಾರಿ ಮಾಡುತ್ತವೆ?

  • ರೆಕಾರ್ಡಿಂಗ್‌ಗಾಗಿ ಮಕ್ಕಳು ಮತ್ತು ಅವರ ಕುಟುಂಬದವರು ಹೇಗೆ ತಯಾರಿ ಮಾಡುತ್ತಾರೆ?

  • ಯಾವ ರಾಜ್ಯಗೀತೆಗಳು ನಿಮಗಿಷ್ಟ?ಯಾಕಿಷ್ಟ?