ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ
“ಪ್ರೀತಿ ಮತ್ತು ಶಾಂತಿಯ ದೇವರು” ಆಗಿರುವ ಯೆಹೋವನು, “ಸಮಾಧಾನದ ಪ್ರಭು” ಆಗಿರುವ ಯೇಸುವನ್ನು ಯುದ್ಧ ಮಾಡಲು ಯಾಕೆ ನೇಮಿಸಿದನು?—2ಕೊರಿಂ 13:11; ಯೆಶಾ 9:6.
-
ಯೆಹೋವ ಮತ್ತು ಯೇಸು ನೀತಿಯನ್ನು ಪ್ರೀತಿಸುತ್ತಾರೆ ಮತ್ತು ಕೆಟ್ಟತನವನ್ನು ದ್ವೇಷಿಸುತ್ತಾರೆ
-
ಭೂಮಿಯಲ್ಲಿ ಶಾಶ್ವತ ಶಾಂತಿ ಮತ್ತು ನ್ಯಾಯ ಇರಬೇಕಾದರೆ ಮೊದಲು ಕೆಟ್ಟ ಜನರನ್ನು ನಾಶ ಮಾಡಲೇಬೇಕು
-
ದೇವರ ಸ್ವರ್ಗೀಯ ಸೈನ್ಯ ಬಿಳೀ ಕುದುರೆಗಳ ಮೇಲೆ ಸವಾರಿ ಮಾಡುತ್ತಿತ್ತು ಮತ್ತು ಆ ಸೈನ್ಯಕ್ಕೆ ಸೇರಿದವರು ಬಿಳಿಯ, ನಿರ್ಮಲವಾದ, ನಯವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಇದರ ಅರ್ಥ ಅವರು “ಯುದ್ಧವನ್ನು ಮುಂದುವರಿಸುವುದು ನೀತಿಯಿಂದಲೇ”
ಈ ಯುದ್ಧವನ್ನು ಪಾರಾಗಬೇಕಾದರೆ ನಾವೇನು ಮಾಡಬೇಕು?—ಚೆಫ 2:3