ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಹೊಂದಿಸಿಕೊಳ್ಳಿ
ಯಾಕೆ ಪ್ರಾಮುಖ್ಯ: ಅಭಿಷಿಕ್ತ ಕ್ರೈಸ್ತರು ಮತ್ತು ಬೇರೆ ಕುರಿಗಳು, “ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲು” ಎಲ್ಲಾ ರೀತಿಯ ಜನರನ್ನು ಆಮಂತ್ರಿಸುತ್ತಿದ್ದಾರೆ. (ಪ್ರಕ 22:17) ಈ ಜೀವಜಲ, ಪಾಪ ಮತ್ತು ಮರಣದಿಂದ ನಮ್ಮನ್ನು ರಕ್ಷಿಸಲು ಯೆಹೋವನು ಮಾಡಿದ ಎಲ್ಲಾ ಏರ್ಪಾಡುಗಳನ್ನು ಸೂಚಿಸುತ್ತೆ. ನಮ್ಮ ಸುತ್ತಲೂ ಬೇರೆ ಬೇರೆ ಪದ್ಧತಿಗಳನ್ನು ಪಾಲಿಸುವ, ಬೇರೆ ಬೇರೆ ಧರ್ಮದ ಜನರಿದ್ದಾರೆ. ಅವರಿಗೆಲ್ಲಾ ನಾವು “ನಿತ್ಯವಾದ ಸುವಾರ್ತೆ”ಯನ್ನು ತಿಳಿಸಬೇಕು. ಆದರೆ ಅವರಿಗೆ ಇಷ್ಟ ಆಗೋ ತರ ಅದನ್ನು ಮಾಡಬೇಕು.—ಪ್ರಕ 14:6.
ಹೇಗೆ ಮಾಡಬಹುದು:
-
ನಿಮ್ಮ ಸೇವಾ ಕ್ಷೇತ್ರದಲ್ಲಿರುವ ಜನರ ಮನಸ್ಸನ್ನು ಮುಟ್ಟುವ ಒಂದು ವಿಷಯ ಮತ್ತು ವಚನವನ್ನು ಆರಿಸಿಕೊಳ್ಳಿ. ಮಾದರಿ ಸಂಭಾಷಣೆ ಅಥವಾ ನಿಮಗೆ ಒಳ್ಳೇ ಫಲಿತಾಂಶ ಸಿಕ್ಕಿದ ಯಾವುದಾದರು ಒಂದು ಸಂಭಾಷಣೆಯನ್ನು ಬಳಸಬಹುದು. ಯಾವ ವಿಷಯ ಮತ್ತು ವಚನದ ಬಗ್ಗೆ ಮಾತಾಡಿದರೆ ಜನ ಚೆನ್ನಾಗಿ ಕೇಳುತ್ತಾರೆ? ಇತ್ತೀಚಿಗೆ ನಡೆದ ಯಾವ ಘಟನೆಯ ಬಗ್ಗೆ ಜನ ಮಾತಾಡುತ್ತಿದ್ದಾರೆ? ಒಬ್ಬ ಪುರುಷ ಅಥವಾ ಸ್ತ್ರೀ ಹತ್ತಿರ ಯಾವ ವಿಷಯದ ಬಗ್ಗೆ ಮಾತಾಡಬಹುದು?
-
ನಿಮ್ಮ ಸ್ಥಳದಲ್ಲಿರುವ ಜನ ಸಾಮಾನ್ಯವಾಗಿ ಬಳಸುವ ವಂದನೆಗಳನ್ನು ರೀತಿರಿವಾಜುಗಳನ್ನು ನಿಮ್ಮ ಸಂಭಾಷಣೆಯಲ್ಲಿ ಒಳಗೂಡಿಸಿ.—2ಕೊರಿಂ 6:3, 4
-
ಬೋಧನಾ ಸಲಕರಣಾ ಪೆಟ್ಟಿಗೆಯಲ್ಲಿರುವ ಪ್ರಕಾಶನಗಳ ಮತ್ತು ವಿಡಿಯೋಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಅವನ್ನು ಆಸಕ್ತಿ ತೋರಿಸಿದವರಿಗೆ ಕೊಡಿ
-
ನಿಮ್ಮ ಕ್ಷೇತ್ರದಲ್ಲಿ ಜನ ಯಾವೆಲ್ಲಾ ಭಾಷೆ ಮಾತಾಡುತ್ತಾರೆ ಅಂತ ಕಂಡುಹಿಡಿದು ಆ ಭಾಷೆಯ ಪ್ರಕಾಶನ ಅಥವಾ ವಿಡಿಯೋ ಡೌನ್‌ಲೋಡ್ ಮಾಡಿ
-
ಜನರ ಅಗತ್ಯಕ್ಕೆ ತಕ್ಕಂತೆ ನಿಮ್ಮ ಸಂಭಾಷಣೆಯನ್ನು ಹೊಂದಿಸಿಕೊಳ್ಳಿ. (1ಕೊರಿಂ 9:19-23) ಉದಾಹರಣೆಗೆ, ತಮಗೆ ಪ್ರಿಯರಾದ ಒಬ್ಬರು ತೀರಿಹೋಗಿದ್ದಾರೆ ಅಂತ ಮನೆಯವರು ಹೇಳಿದಾಗ ನೀವೇನು ಹೇಳುವಿರಿ?
ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಪ್ರಚಾರಕರು ಮನೆಯವರೊಂದಿಗೆ ಯಾವ ವಿಷಯದ ಬಗ್ಗೆ ಮಾತಾಡಲು ಆರಂಭಿಸಿದರು?
-
ಮನೆಯವರ ಸನ್ನಿವೇಶ ಹೇಗಿತ್ತು?
-
ಈ ಸಂದರ್ಭಕ್ಕೆ ಯಾವ ವಚನ ಸೂಕ್ತವಾಗಿತ್ತು ಮತ್ತು ಯಾಕೆ?
-
ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ಇಷ್ಟ ಆಗುವಂಥ ರೀತಿಯಲ್ಲಿ ನಿಮ್ಮ ಸಂಭಾಷಣೆಯನ್ನು ಹೇಗೆ ಹೊಂದಿಸಿಕೊಳ್ಳುತ್ತೀರಿ?