ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?

ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?

ನಿಮ್ಮ ವಯಸ್ಸು 23-65 ವರ್ಷದೊಳಗೆ ಇದ್ಯಾ? ಪೂರ್ಣ ಸಮಯದ ಸೇವೆ ಮಾಡ್ತಾ ಇದ್ದೀರಾ? ಒಳ್ಳೇ ಆರೋಗ್ಯ ಇದ್ಯಾ? ಅಗತ್ಯ ಇದ್ದ ಕಡೆ ಹೋಗಿ ಸೇವೆ ಮಾಡಲು ಆಗುತ್ತಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ರ ಹೌದು ಆಗಿದ್ರೆ ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕೋದ್ರ ಬಗ್ಗೆ ಯೋಚಿಸಿದ್ದೀರಾ? ಈ ಶಾಲೆಯ ಆರಂಭದಿಂದ ಇಂದಿನವರೆಗೆ ಸಾವಿರಾರು ದಂಪತಿಗಳು, ಅವಿವಾಹಿತ ಸಹೋದರ ಸಹೋದರಿಯರು ಹಾಜರಾಗಿ ತುಂಬ ಪ್ರಯೋಜನ ಪಡೆದಿದ್ದಾರೆ. ಆದ್ರೆ ಈ ಶಾಲೆಗೆ ಹಾಜರಾಗಲು ಇನ್ನೂ ಹೆಚ್ಚು ಅವಿವಾಹಿತ ಸಹೋದರರ ಅಗತ್ಯವಿದೆ. ಹಾಗಾಗಿ ಯೆಹೋವನನ್ನ ಮೆಚ್ಚಿಸೋಕೆ, ಆತನ ಮಗನನ್ನ ಅನುಕರಿಸೋಕೆ ನಿಮಗಿರೋ ಬಯಕೆಯನ್ನ ಹೆಚ್ಚಿಸಲು ಪ್ರಾರ್ಥಿಸಿ. (ಕೀರ್ತ 40:8; ಮತ್ತಾ 20:28; ಇಬ್ರಿ 10:7) ನಂತ್ರ ಈ ಶಾಲೆಗೆ ಅರ್ಹರಾಗಲು ಕೆಲಸ ಅಥವಾ ವೈಯಕ್ತಿಕ ವಿಷಯದಲ್ಲಿ ಬದಲಾವಣೆ ಮಾಡೋ ಅವಶ್ಯಕತೆ ಇದ್ಯಾ ಅಂತ ಯೋಚಿಸಿ ಅದನ್ನ ಮಾಡಲು ಪ್ರಯತ್ನಿಸಿ.

ಈ ಶಾಲೆಗೆ ಹಾಜರಾದವರಿಗೆ ಯೆಹೋವನ ಸೇವೇಲಿ ಯಾವೆಲ್ಲಾ ಅವಕಾಶಗಳು ಸಿಕ್ಕಿವೆ? ಕೆಲವರಿಗೆ ಬೇರೆ ಭಾಷೆ ಮಾತಾಡೋ ಸ್ಥಳಗಳಿಗೆ ಹೋಗಿ ಸೇವೆ ಮಾಡೋ ಅಥವಾ ಕೆಲವು ದೇಶದ ಮಹಾನಗರಗಳಲ್ಲಿ ವಿಶೇಷ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸೋ ನೇಮಕ ಸಿಕ್ಕಿದೆ. ಇನ್ನೂ ಕೆಲವರು ಬದಲಿ ಸಂಚರಣ ಮೇಲ್ವಿಚಾರಕರಾಗಿ, ಸಂಚರಣ ಮೇಲ್ವಿಚಾರಕರಾಗಿ ಅಥವಾ ಮಿಷನರಿಗಳಾಗಿ ಸೇವೆಮಾಡ್ತಿದ್ದಾರೆ. ಹೀಗೆ ಯೆಹೋವನ ಸೇವೇಲಿ ಮಾಡಲು ತುಂಬಾ ಕೆಲಸ ಇದೆ. ಹಾಗಾಗಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಅಂತ ಹೇಳುತ್ತಾ ಯೆಶಾಯ ತೋರಿಸಿದ ಮನೋಭಾವನ ನೀವೂ ತೋರಿಸಿ.—ಯೆಶಾ 6:8.

ಮಿಷನರಿಗಳು—ಕೊಯ್ಲಿನ ಕೆಲಸಗಾರರು ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಮಿಷನರಿಗಳನ್ನ ಹೇಗೆ ಆರಿಸಲಾಗುತ್ತೆ?

  • ಮಿಷನರಿಗಳು ಯಾವ ಒಳ್ಳೇ ಕೆಲಸ ಮಾಡುತ್ತಿದ್ದಾರೆ?

  • ಮಿಷನರಿ ಸೇವೆ ಮಾಡೋದ್ರಿಂದ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?