ನಮ್ಮ ಕ್ರೈಸ್ತ ಜೀವನ
ನಮ್ಮ ಪ್ರಾರ್ಥನೆಯನ್ನ ಯೆಹೋವ ಅಮೂಲ್ಯವಾಗಿ ನೋಡ್ತಾನೆ
ನಾವು ಮಾಡೋ ಪ್ರಾರ್ಥನೆಗಳು ಯೆಹೋವನಿಗೆ ದೇವಾಲಯದಲ್ಲಿ ಅರ್ಪಿಸುತ್ತಿದ್ದ ಪರಿಮಳ ಧೂಪದ ತರ ಇರುತ್ತೆ. (ಕೀರ್ತ 141:2) ನಾವು ಯೆಹೋವನನ್ನು ಪ್ರೀತಿಸ್ತೀವಿ, ನಾವು ಆತನಿಗೆ ಋಣಿಗಳಾಗಿದ್ದೀವಿ ಅಂತ ಆತನಿಗೆ ಹೇಳಿದಾಗ, ನಮ್ಮ ಆಸೆ ಆಕಾಂಕ್ಷೆಗಳನ್ನ ಮತ್ತು ಚಿಂತೆಗಳನ್ನ ಆತನ ಹತ್ರ ತೋಡಿಕೊಂಡಾಗ, ಆತನ ಮಾರ್ಗದರ್ಶನೆಗಾಗಿ ಕೇಳಿಕೊಂಡಾಗ ಆತನ ಜೊತೆ ಇರೋ ನಮ್ಮ ಸ್ನೇಹ ತುಂಬ ಗಟ್ಟಿಯಾಗುತ್ತೆ. ಕೂಟಗಳಲ್ಲಿ ಮತ್ತು ಬೇರೆ ಕಡೆ ನಾವು ಮಾಡೋ ಪ್ರಾರ್ಥನೆಯನ್ನ ಯೆಹೋವ ಇಷ್ಟಪಡ್ತಾನೆ ನಿಜ. ಆದ್ರೆ ವೈಯಕ್ತಿಕವಾಗಿ ಮಾಡೋ ಪ್ರಾರ್ಥನೆಯನ್ನ ಇನ್ನೂ ಇಷ್ಟಪಡ್ತಾನೆ. ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲಾ ನಾವು ಹೇಳ್ಕೊಂಡು ತುಂಬ ಹೊತ್ತು ಆತನ ಜೊತೆ ಮಾತಾಡುವಾಗ ಯೆಹೋವನಿಗೆ ತುಂಬ ಸಂತೋಷ ಆಗುತ್ತೆ.—ಜ್ಞಾನೋ 15:8.
ನನಗೆ ಪ್ರಾರ್ಥನೆನೇ ಪ್ರಾಮುಖ್ಯ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಸಹೋದರ ಜಾನ್ಸನ್ಗೆ ಯಾವೆಲ್ಲ ಸುಯೋಗಗಳಿತ್ತು?
-
ಸಹೋದರ ಜಾನ್ಸನ್ ಯಾವಾಗಲೂ ಯೆಹೋವನನ್ನೇ ನಂಬಿದ್ದರು ಅಂತ ಅವರ ಪ್ರಾರ್ಥನೆಯಿಂದ ಹೇಗೆ ಗೊತ್ತಾಗುತ್ತೆ?
-
ಜಾನ್ಸನ್ ಅವರಿಂದ ನೀವೇನು ಕಲಿತ್ರಿ?