ನಮ್ಮ ಕ್ರೈಸ್ತ ಜೀವನ
ನಾವು ಪಟ್ಟ ಶ್ರಮವನ್ನ ಯೆಹೋವ ಮರೆಯಲ್ಲ
‘ನಾವು ಬೇರೆಯವರಿಗೋಸ್ಕರ ಶ್ರಮ ಪಟ್ಟು ಮಾಡೋ ಕೆಲಸವನ್ನ ಯಾರೂ ಲೆಕ್ಕಕ್ಕೆ ತಗೊಳ್ಳಲ್ಲ, ಬೇಗ ಮರೆತುಹೋಗ್ತಾರೆ’ ಅಂತ ಕೆಲವೊಮ್ಮೆ ನಮಗೆ ಅನಿಸಬಹುದು. ಆದ್ರೆ ಯೆಹೋವನಿಗೋಸ್ಕರ ಮಾಡೋ ಕೆಲಸನ ಆತನು ಮರೆತು ಹೋಗ್ತಾನಾ? ಇಲ್ಲ, ನಾವು ಮನಸಾರೆ ಮಾಡೋ ಕೆಲಸವನ್ನ ಆತನು ಯಾವತ್ತೂ ಮರೆಯಲ್ಲ. ನಮ್ಮನ್ನ ಮೆಚ್ಚಿಕೊಳ್ತಾನೆ. ನಮಗೆ ಆರೋಗ್ಯದ ಸಮಸ್ಯೆಯಿಂದ ಕೆಲವೊಮ್ಮೆ ಅಷ್ಟು ಚೆನ್ನಾಗಿ ಸೇವೆ ಮಾಡೋಕೆ ಆಗದಿದ್ರೂ ಆತನು ನಮ್ಮನ್ನ ಮರೆಯಲ್ಲ.—ಇಬ್ರಿ 6:10.
ಯೆಹೋವ ಯಾವತ್ತೂ ಮರೆಯಲ್ಲ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಸಹೋದರ ಹಿಬ್ಶ್‌ಮ್ಯಾನ್ ಯೆಹೋವನಿಗೋಸ್ಕರ ಯಾವೆಲ್ಲಾ ಸೇವೆ ಮಾಡಿದ್ದಾರೆ?
-
ಸಹೋದರ ಹಿಬ್ಶ್‌ಮ್ಯಾನ್‌ಗೆ ವಯಸ್ಸಾಗಿದೆ, ಅವರ ಹೆಂಡತಿನೂ ತೀರಿಹೋಗಿದ್ದಾರೆ. ಈಗ ಅವರಿಗೆ ಜಾಸ್ತಿ ಸೇವೆ ಮಾಡೋಕೆ ಆಗದೆ ಇದ್ರೂ ಯೆಹೋವ ಅವರನ್ನ ಮರೆತಿಲ್ಲ ಅಂತ ಹೇಗೆ ಹೇಳಬಹುದು?
-
ಸಹೋದರ ಹಿಬ್ಶ್‌ಮ್ಯಾನ್ ಅವರ ಪೂರ್ಣ ಸಮಯದ ಸೇವೆಯ ಜೀವನ ಚೆನ್ನಾಗಿತ್ತು ಅಂತ ಹೇಗೆ ಹೇಳಬಹುದು?—ಜ್ಞಾನೋ 10:22