ನಮ್ಮ ಕ್ರೈಸ್ತ ಜೀವನ
“ಕೊಡೋದನ್ನ ರೂಢಿ ಮಾಡ್ಕೊಳ್ಳಿ”
ನಾವು ಒಬ್ಬರಿಗೆ ಉದಾರವಾಗಿ ಕೊಟ್ರೆ ಅದನ್ನ ನೋಡಿ ಇನ್ನೊಬ್ರು ಕಲಿತಾರೆ ಅಂತ ಯೇಸು ಹೇಳಿದನು. (ಲೂಕ 6:38) ನಿಮ್ಮನ್ನ ನೋಡಿ ಸಹೋದರ ಸಹೋದರಿಯರು ಪ್ರೀತಿ ಮತ್ತು ಧಾರಾಳ ಮನಸ್ಸು ತೋರಿಸ್ತಾರೆ.
ಖುಷಿಖುಷಿಯಿಂದ ಬೇರೆಯವರಿಗೆ ಕೊಡೋದೂ ನಮ್ಮ ಆರಾಧನೆಯಲ್ಲಿ ಸೇರಿದೆ. ಯಾರು ಸಹೋದರ ಸಹೋದರಿಯರಿಗೆ ಧಾರಾಳವಾಗಿ ಸಹಾಯ ಮಾಡೋಕೆ ಮುಂದೆ ಬರುತ್ತಾರೋ ಅಂಥವರನ್ನ ಯೆಹೋವ ಗುರುತಿಸ್ತಾನೆ ಮತ್ತು ಅವರಿಗೆ ಆಶೀರ್ವಾದ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ.—ಜ್ಞಾನೋ 19:17.
ಉದಾರಿಗಳಾಗಿರೋದಕ್ಕೆ ನಿಮ್ಮನ್ನ ಮೆಚ್ಚಿಕೊಳ್ತೀವಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ನೀವು ಕೊಡೋ ಕಾಣಿಕೆಗಳಿಂದ ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಆಗ್ತಿದೆ?
-
ನಮ್ಮಿಂದ ಎಷ್ಟಾಗುತ್ತೋ ಅಷ್ಟು ಕೊಡೋದನ್ನ ಯಾಕೆ ರೂಢಿ ಮಾಡಿಕೊಳ್ಳಬೇಕು?—jw.orgಯಲ್ಲಿ “ಸಮೃದ್ಧಿ ಕೊರತೆಯನ್ನ ನೀಗಿಸಿತು” ಅನ್ನೋ ಲೇಖನವನ್ನೂ ಓದಿ.