ಕ್ರೈಸ್ತ ಜೀವನ
ಪವಿತ್ರ ಶಕ್ತಿ ಇದ್ರೆ ಎಂಥಾ ಕಷ್ಟದ ಕೆಲಸವನ್ನೂ ಮಾಡಕ್ಕಾಗುತ್ತೆ!
ದೇವಜನರು ಇಲ್ಲಿ ತನಕ ತುಂಬ ಸಾಧನೆಗಳನ್ನ ಮಾಡ್ತಾ ಬಂದಿದ್ದಾರೆ. ಇದೆಲ್ಲ ಆಗಿದ್ದು ಅವರ ಬುದ್ಧಿ-ಸಾಮರ್ಥ್ಯದಿಂದ ಅಲ್ಲ, ಯೆಹೋವನ ಸಹಾಯದಿಂದ. ಯೆಹೋವನ ಸಂಘಟನೆ 1954ರಲ್ಲಿ ದ ನ್ಯೂ ವರ್ಲ್ಡ್ ಸೊಸೈಟಿ ಇನ್ ಆ್ಯಕ್ಷನ್ ಅನ್ನೋ ಚಲನಚಿತ್ರ ಬಿಡುಗಡೆ ಮಾಡಿತು. ಇದರಲ್ಲಿ ಮುಖ್ಯವಾಗಿ ಕೆಲಸ ಮಾಡಿದ್ದು ಬೆತೆಲಿಗರು. ಅವರಿಗೆ ಚಲನಚಿತ್ರ ತಯಾರಿಸೋದರ ಬಗ್ಗೆ ಯಾವ ಅನುಭವನೂ ಇರಲಿಲ್ಲ. ಹಾಗಾಗಿ ಯೆಹೋವನ ಸಹಾಯದಿಂದ ಮಾತ್ರನೇ ಆ ಚಲನಚಿತ್ರ ತಯಾರಿಸೋಕೆ ಆಯ್ತು. ನಮ್ಮ ಮೇಲಲ್ಲ, ಯೆಹೋವನ ಮೇಲೆ ಭರವಸೆ ಇಟ್ರೆ ಎಷ್ಟೇ ಕಷ್ಟವಾದ ಕೆಲಸನೂ ಮಾಡಕ್ಕಾಗುತ್ತೆ ಅಂತ ಇದರಿಂದ ಗೊತ್ತಾಗುತ್ತೆ.—ಜೆಕ 4:6.
“ದ ನ್ಯೂ ವರ್ಲ್ಡ್ ಸೊಸೈಟಿ ಇನ್ ಆ್ಯಕ್ಷನ್” ಚಲನಚಿತ್ರ ನಿರ್ಮಾಣ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಮುಖ್ಯ ಕಾರ್ಯಾಲಯದ ಬಗ್ಗೆ ಒಂದು ಚಲನಚಿತ್ರ ತಯಾರಿಸೋಣ ಅಂತ ಯಾಕೆ ತೀರ್ಮಾನ ಮಾಡಿದ್ರು?
-
ಬೆತೆಲ್ ಒಬ್ಬ ಮನುಷ್ಯನ ದೇಹ ಇದ್ದ ಹಾಗೆ ಅಂತ ಆ ಚಲನಚಿತ್ರ ಹೇಗೆ ವಿವರಿಸ್ತು?—1ಕೊರಿಂ 12:14-20
-
ಆ ಚಲನಚಿತ್ರವನ್ನ ತಯಾರಿಸೋ ವಿಷಯದಲ್ಲಿ ಸಹೋದರರಿಗೆ ಯಾವ ಸವಾಲುಗಳು ಬಂದವು? ಅದೆಲ್ಲ ಹೇಗೆ ಬಗೆಹರಿಯಿತು?
-
ಈ ವಿಡಿಯೋ ನಮಗೆ ಯೆಹೋವ ದೇವರ ಪವಿತ್ರ ಶಕ್ತಿ ಬಗ್ಗೆ ಏನು ಕಲಿಸುತ್ತೆ?