ನಮ್ಮ ಕ್ರೈಸ್ತ ಜೀವನ
ನಿಯತ್ತಿಗೂ, ಯೋಚನೆಗೂ ಏನು ಸಂಬಂಧ?
ನಾವು ಮಾತು ಮತ್ತು ನಡತೆಯಲ್ಲಿ ಅಷ್ಟೇ ಅಲ್ಲ ಯೋಚನೆಯಲ್ಲೂ ನಿಯತ್ತಾಗಿದ್ದೀವಿ ಅಂತ ತೋರಿಸಬೇಕು. (ಕೀರ್ತ 19:14) ಅದಕ್ಕೆ ಬೈಬಲ್ ಯಾವುದು ಸತ್ಯಾನೋ, ತುಂಬ ಮುಖ್ಯನೋ, ನೀತಿನೋ, ಶುದ್ಧನೋ, ಯಾವುದು ಒಳ್ಳೇದೋ, ಪ್ರೀತಿನ ಚಿಗುರಿಸುತ್ತೋ, ಹೊಗಳಿಕೆಗೆ ಯೋಗ್ಯವಾಗಿದ್ಯೋ ಅಂಥ ಎಲ್ಲ ವಿಷ್ಯಗಳಿಗೆ ಯಾವಾಗ್ಲೂ ಗಮನಕೊಡಿ ಅಂತ ಹೇಳುತ್ತೆ. (ಫಿಲಿ 4:8) ಹಾಗಂತ ನಾವು ಯಾವತ್ತೂ ತಪ್ಪಾಗಿ ಯೋಚನೆನೇ ಮಾಡಲ್ಲ ಅಂತಲ್ಲ. ಈ ತರ ತಪ್ಪಾದ ಯೋಚನೆ ಬಂದಾಗ ಸರಿಯಾಗಿ ಯೋಚನೆ ಮಾಡೋಕೆ ಸ್ವನಿಯಂತ್ರಣ ಸಹಾಯ ಮಾಡುತ್ತೆ. ನಿಯತ್ತಾಗಿ ಯೋಚನೆ ಮಾಡಿದ್ರೆ ನಿಯತ್ತಾಗಿ ನಡ್ಕೊಳ್ತೀವಿ.—ಮಾರ್ಕ 7:21-23.
ಈ ವಚನದಲ್ಲಿರೋ ಯಾವ ಗುಣಗಳನ್ನ ನಾವು ಬೆಳೆಸಿಕೊಳ್ಳಬಾರದು?