ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ನಾನು ಹೇಗೆ ಒಳ್ಳೇ ನಡತೆ ತೋರಿಸ್ಲಿ?

ನಾನು ಹೇಗೆ ಒಳ್ಳೇ ನಡತೆ ತೋರಿಸ್ಲಿ?

ನಾವು ಹೇಗೆ ನಡ್ಕೊಳ್ತೀವಿ ಅಂತ ಜನ ಗಮನಿಸ್ತಾರೆ. (1ಕೊರಿಂ 4:9) ‘ಯೆಹೋವನಿಗೆ ಇಷ್ಟ ಆಗೋ ತರ ಮಾತಾಡ್ತೀನ ನಡ್ಕೊಳ್ತೀನ‘ ಅಂತ ನಾವು ನಮ್ಮನ್ನೇ ಕೇಳ್ಕೊಬೇಕು. (1ಪೇತ್ರ 2:12) ತುಂಬ ವರ್ಷಗಳಿಂದ ಯೆಹೋವನ ಸಾಕ್ಷಿಗಳಾದ ನಮಗೆ ಒಳ್ಳೇ ಹೆಸರಿದೆ. ಆ ಹೆಸರನ್ನ ಉಳಿಸ್ಕೊಳ್ಳೋ ಜವಾಬ್ದಾರಿ ನಮಗಿದೆ.—ಪ್ರಸಂ 10:1.

ಈ ಕೆಳಗಿನ ಸನ್ನಿವೇಶಗಳಲ್ಲಿ ನಾವು ಹೇಗೆ ನಡ್ಕೊಳ್ಳಬೇಕು? ಸರಿಯಾಗಿ ನಡ್ಕೊಳ್ಳೋಕೆ ಯಾವ ವಚನಗಳು ನಮಗೆ ಸಹಾಯ ಮಾಡುತ್ತೆ?

  • ಸತ್ಯದಲ್ಲಿ ಇಲ್ಲದೆ ಇರೋರು ನೋವು ಮಾಡಿದ್ರೆ

  • ನಮ್ಮ ಬಟ್ಟೆ, ಕಾರು ಮತ್ತು ಮನೆ ಗಲೀಜಾಗಿದ್ರೆ

  • ಸರ್ಕಾರದ ನಿಯಮ ಸರಿಯಿಲ್ಲ ಅಂಥ ಅನಿಸಿದ್ರೆ

ನಮಗಿರೋ ಒಳ್ಳೆ ಹೆಸರನ್ನ ರೈಟಿಂಗ್‌ ಡಿಪಾರ್ಟ್‌ಮೆಂಟ್‌ ಹೇಗೆ ಉಳಿಸಿಕೊಂಡು ಬಂದಿದೆ?

ಸತ್ಯಕ್ಕೆ ಗೌರವ ಮತ್ತು ಪ್ರೀತಿ ತೋರಿಸಿದವರು ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ತರ ಕೊಡಿ:

ಸರಿಯಾದ ಮಾಹಿತಿ ಕೊಡೋಕೆ ಸಂಘಟನೆ ಹಾಕೋ ಪ್ರಯತ್ನದ ಬಗ್ಗೆ ನಿಮಗೆ ಹೇಗೆ ಅನಿಸುತ್ತೆ?