ನಮ್ಮ ಕ್ರೈಸ್ತ ಜೀವನ
‘ಏನಾದ್ರೂ ತೆಗೆದಿಡಿ’
ಮನಸಾರೆ ಕಾಣಿಕೆಗಳನ್ನ ಕೊಡೋಕೆ “ಏನಾದ್ರೂ ತೆಗೆದಿಡಬೇಕು.” ಅಷ್ಟೇ ಅಲ್ಲ ಅಂಥ ರೂಢಿಯನ್ನು ಬೆಳೆಸಿಕೊಳ್ಳಬೇಕು ಅಂತ ಅಪೊಸ್ತಲ ಪೌಲ ಹೇಳಿದ. (1ಕೊರಿಂ 16:2) ಹೀಗೆ ಮಾಡಿದ್ರೆ ನಾವು ಖುಷಿಯಾಗಿ ಇರ್ತೀವಿ ಅಷ್ಟೇ ಅಲ್ಲ ಯೆಹೋವನ ಸೇವೆನೂ ಬೆಂಬಲಿಸಿದ ಹಾಗೆ ಆಗುತ್ತೆ. ನಾವು ಕೊಡೋ ಕಾಣಿಕೆ ತುಂಬ ಚಿಕ್ಕದು, ಅದಕ್ಕೆ ಅಷ್ಟೇನೂ ಬೆಲೆ ಇಲ್ಲ ಅಂತ ನಮಗೆ ಅನಿಸಬಹುದು. ಆದ್ರೆ ಯೆಹೋವನ ಕಣ್ಣಲ್ಲಿ ಅದಕ್ಕೆ ತುಂಬ ಬೆಲೆ ಇದೆ. ಬೆಲೆ ಬಾಳೋ ವಸ್ತುಗಳಿಂದ ನಾವು ಆತನನ್ನ ಗೌರವಿಸಿದ್ರೆ ಆತನಿಗೆ ತುಂಬ ಇಷ್ಟವಾಗುತ್ತೆ.—ಜ್ಞಾನೋ 3:9.
ಕಾಣಿಕೆ ತೆಗೆದಿಟ್ಟಿದ್ದಕ್ಕೆ ಥ್ಯಾಂಕ್ಸ್, ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಕಾಣಿಕೆಗಳನ್ನ ಹಾಕೋದ್ರ ಬಗ್ಗೆ ಮುಂಚೆನೆ ಪ್ಲಾನ್ ಮಾಡೋದ್ರಿಂದ ಏನು ಪ್ರಯೋಜನ?
-
ಮೊದಲೇ ‘ಏನಾದ್ರೂ ತೆಗೆದಿಡೋಕೆ‘ ಕೆಲವರು ಹೇಗೆಲ್ಲಾ ಪ್ಲಾನ್ ಮಾಡಿದ್ದಾರೆ?