ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 16-22

ಕೀರ್ತನೆ 119:57-120

ಡಿಸೆಂಬರ್‌ 16-22

ಗೀತೆ 154 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಕಷ್ಟಗಳನ್ನ ಸಹಿಸಿಕೊಳ್ಳೋದು ಹೇಗೆ?

(10 ನಿ.)

ದೇವರ ವಾಕ್ಯವನ್ನ ತಪ್ಪದೇ ಓದಿ ಅಧ್ಯಯನ ಮಾಡಬೇಕು (ಕೀರ್ತ 119:61; ಕಾವಲಿನಬುರುಜು06 7/1 ಪುಟ 12 ಪ್ಯಾರ 2; ಕಾವಲಿನಬುರುಜು00 12/1 ಪುಟ 14 ಪ್ಯಾರ 3)

ಕಷ್ಟಗಳಿಂದ ನಾವು ಪಾಠ ಕಲೀಬೇಕು (ಕೀರ್ತ 119:71; ಕಾವಲಿನಬುರುಜು06 9/1 ಪುಟ 19 ಪ್ಯಾರ 2)

ಸಹಾಯ ಮಾಡಪ್ಪಾ ಅಂತ ಯೆಹೋವನಲ್ಲಿ ಕೇಳಬೇಕು (ಕೀರ್ತ 119:76; ಕಾವಲಿನಬುರುಜು17.07 ಪುಟ 13 ಪ್ಯಾರ 3, 5)

ನಿಮ್ಮನ್ನೇ ಕೇಳಿಕೊಳ್ಳಿ: ‘ಕಷ್ಟಗಳನ್ನ ತಾಳಿಕೊಳ್ಳೋಕೆ ಯೆಹೋವ ನನಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಮನೆಯವರಿಗೆ ನಮ್ಮ ವೆಬ್‌ಸೈಟ್‌ ತೋರಿಸಿ ಮತ್ತು jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ನೀವು ಭೇಟಿ ಮಾಡಿದ ವ್ಯಕ್ತಿಯನ್ನ ಮುಂದಿನ ವಾರದ ಸಾರ್ವಜನಿಕ ಭಾಷಣಕ್ಕೆ ಕರೀರಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋವನ್ನ ಪರಿಚಯಿಸಿ, ಚರ್ಚಿಸಿ. (ಆದ್ರೆ ಪ್ಲೇ ಮಾಡಬೇಡಿ) (ಪ್ರೀತಿಸಿ-ಕಲಿಸಿ ಪಾಠ 8ರ ಪಾಯಿಂಟ್‌ 3)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಅಭಿನಯ. ijwbq ಲೇಖನ 157—ವಿಷ್ಯ: ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ? (ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 3)

ನಮ್ಮ ಕ್ರೈಸ್ತ ಜೀವನ

ಗೀತೆ 135

7. ಸಹಿಸಿಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ

(15 ನಿ.) ಚರ್ಚೆ.

ಸಹಿಸಿಕೊಳ್ಳೋದು ಅಂದ್ರೆ ಕಷ್ಟಗಳು ಬಂದಾಗ ಸೋತು ಹೋಗದೆ ಇರೋದೇ ಆಗಿದೆ. ಇದರಲ್ಲಿ ಎದೆಗುಂದದೆ, ಸರಿಯಾಗಿ ಯೋಚಿಸ್ತಾ, ಮುಂದೆ ಸಮಸ್ಯೆಗಳು ಬಗೆಹರಿಯುತ್ತೆ ಅನ್ನೋ ನಿರೀಕ್ಷೆ ಇಟ್ಕೊಳ್ಳೋದು ಸೇರಿದೆ. ನಾವು ಸಹಿಸಿಕೊಳ್ಳೋಕೆ ಕಲಿತ್ರೆ ಕಷ್ಟಗಳು ಬಂದಾಗ ಯೆಹೋವನನ್ನ ಮತ್ತು ಆತನ ಸೇವೆಯನ್ನ ಬಿಟ್ಟು ‘ಹಿಂದೆ ಹೋಗಲ್ಲ.’ (ಇಬ್ರಿ 10:36-39) ನಮಗೆ ಬರೋ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಯೆಹೋವ ಖಂಡಿತ ಸಹಾಯ ಮಾಡ್ತಾನೆ.—ಇಬ್ರಿ 13:6.

ಪ್ರತಿ ವಚನಗಳ ಹತ್ರ ಯೆಹೋವ ನಾವು ಸಹಿಸಿಕೊಳ್ಳೋಕೆ ಹೇಗೆ ಸಹಾಯ ಮಾಡ್ತಾನೆ ಅಂತ ಬರೆಯಿರಿ.

ಕಷ್ಟಗಳನ್ನ ಅನುಭವಿಸುತ್ತಿರುವವರಿಗಾಗಿ ಪ್ರಾರ್ಥಿಸ್ತಾ ಇರಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಕಷ್ಟದಲ್ಲಿರೋ ನಮ್ಮ ಸಹೋದರ ಸಹೋದರಿಯರ ಬಗ್ಗೆ ತಿಳ್ಕೊಳ್ಳೋಕೆ jw.orgನ್ನ ನಾವು ಹೇಗೆ ಬಳಸಬಹುದು?

  • ಬೇರೆಯವರಿಗೋಸ್ಕರ ಪ್ರಾರ್ಥಿಸೋಕೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ತರಬೇತಿ ಕೊಡಬಹುದು ಮತ್ತು ಅದರಿಂದ ಏನು ಪ್ರಯೋಜನ?

  • ‘ಕಷ್ಟಗಳನ್ನ ಸಹಿಸಿಕೊಳ್ಳೋಕೆ ನಮ್ಮ ಸಹೋದರರಿಗೆ ಸಹಾಯ ಮಾಡಪ್ಪಾ’ ಅಂತ ಯೆಹೋವನ ಹತ್ರ ಪ್ರಾರ್ಥಿಸೋದು ಯಾಕೆ ಮುಖ್ಯ?

  • ನಾವು ಬೇರೆಯವರಿಗೋಸ್ಕರ ಪ್ರಾರ್ಥಿಸೋದ್ರಿಂದ ನಮ್ಮ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಹೇಗೆ ಶಕ್ತಿ ಸಿಗುತ್ತೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 27 ಮತ್ತು ಪ್ರಾರ್ಥನೆ