ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 23-29

ಕೀರ್ತನೆ 119:121-176

ಡಿಸೆಂಬರ್‌ 23-29

ಗೀತೆ 26 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಅನಾವಶ್ಯಕ ಸಮಸ್ಯೆಗಳಿಂದ ಹೇಗೆ ದೂರ ಇರಬಹುದು?

(10 ನಿ.)

ದೇವರ ನೀತಿ ನಿಯಮಗಳನ್ನ ಪ್ರೀತಿಸಬೇಕು (ಕೀರ್ತ 119:127; ಕಾವಲಿನಬುರುಜು18.06 ಪುಟ 17 ಪ್ಯಾರ 5-6)

ಕೆಟ್ಟದ್ದನ್ನ ದ್ವೇಷಿಸಬೇಕು (ಕೀರ್ತ 119:128; ಕಾವಲಿನಬುರುಜು93-E 4/15 ಪುಟ 17 ಪ್ಯಾರ 12)

ಯೆಹೋವನ ಮಾತನ್ನ ಕೇಳಬೇಕು, ಆಗ ‘ಅನುಭವ ಇಲ್ಲದವರ’ ತರ ತಪ್ಪು ಮಾಡಲ್ಲ (ಕೀರ್ತ 119:130, 133; ಜ್ಞಾನೋ 22:3)

ನಿಮ್ಮನ್ನೇ ಕೇಳಿಕೊಳ್ಳಿ, ‘ದೇವರ ನಿಯಮಗಳನ್ನ ಪ್ರೀತಿಸೋಕೆ ಮತ್ತು ಕೆಟ್ಟದ್ದನ್ನ ದ್ವೇಷಿಸೋಕೆ ನಾನು ಇನ್ನೂ ಏನೆಲ್ಲಾ ಮಾಡಬಹುದು?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ. jw.org ವೆಬ್‌ಸೈಟಲ್ಲಿ ಮನೆಯವ್ರಿಗೆ ಇಷ್ಟವಾಗೋ ಮಾಹಿತಿ ಹುಡುಕೋದು ಹೇಗೆ ಅಂತ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 8ರ ಪಾಯಿಂಟ್‌ 3)

6. ಶಿಷ್ಯರಾಗೋಕೆ ಕಲಿಸಿ

(5 ನಿ.) ಆಗಾಗ ಕೂಟಗಳನ್ನ ತಪ್ಪಿಸ್ತಿರೋ ಬೈಬಲ್‌ ವಿದ್ಯಾರ್ಥಿಯೊಂದಿಗೆ ಚರ್ಚೆ. (ಪ್ರೀತಿಸಿ-ಕಲಿಸಿ ಪಾಠ 12ರ ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 83

7. ಹಣದ ಹಿಂದೆ ಬಿದ್ದು ನೋವನ್ನ ಅನುಭವಿಸಬೇಡಿ

(15 ನಿ.) ಚರ್ಚೆ.

ಹಣದ ಹಿಂದೆ ಹೋದ ಎಷ್ಟೋ ಜನ ಇವತ್ತು “ತುಂಬ ದುಃಖ ನೋವಲ್ಲಿ ಬಳಲಿಬೆಂಡಾಗಿದ್ದಾರೆ.” (1ತಿಮೊ 6:9, 10) ನಮ್ಮ ಜೀವನದಲ್ಲಿ ಹಣಾನೇ ಮುಖ್ಯ ಅಂತ ಅದರ ಹಿಂದೆ ಹೋದ್ರೆ ಏನೆಲ್ಲಾ ಅನಾಹುತ ಆಗುತ್ತೆ ಅಂತ ಕೆಳಗೆ ಕೊಡಲಾಗಿದೆ.

  • ಯೆಹೋವನ ಜೊತೆ ನಮಗಿರೋ ಸಂಬಂಧ ಹಾಳಾಗುತ್ತೆ.—ಮತ್ತಾ 6:24

  • ಜೀವನದಲ್ಲಿ ತೃಪ್ತಿ ಇರಲ್ಲ.—ಪ್ರಸಂ 5:10

  • ತಪ್ಪು ಮಾಡೋ ಒತ್ತಡಗಳು ಬರಬಹುದು. ಉದಾಹರಣೆಗೆ, ಸುಳ್ಳು ಹೇಳೋದು, ಕಳ್ಳತನ ಮತ್ತು ಮೋಸ ಮಾಡೋ ಬಲೆಗೆ ನಾವು ಬೀಳಬಹುದು. (ಜ್ಞಾನೋ 28:20) ಒಂದುವೇಳೆ ನಾವು ಇಂಥ ಕೆಲಸಗಳನ್ನ ಮಾಡಿಬಿಟ್ರೆ ನಮ್ಮ ಬಗ್ಗೆ ನಮಗೇ ಅಸಹ್ಯ ಅನಿಸುತ್ತೆ, ನಮ್ಮ ಹೆಸರು ಹಾಳಾಗುತ್ತೆ, ಅಷ್ಟೇ ಅಲ್ಲ ಯೆಹೋವನ ಆಶೀರ್ವಾದವನ್ನೂ ಕಳ್ಕೊಳ್ತೀವಿ.

ಇಬ್ರಿಯ 13:5 ಓದಿ, ಆಮೇಲೆ ಈ ಪ್ರಶ್ನೆ ಕೇಳಿ:

  • ಹಣದಾಸೆಯಿಂದ ಬರೋ ಸಮಸ್ಯೆಗಳಿಂದ ದೂರ ಇರೋಕೆ ನಾವೇನು ಮಾಡಬೇಕು ಮತ್ತು ಯಾಕೆ?

ನಮಗೆ ಹಣದಾಸೆ ಇಲ್ಲದೆ ಇರಬಹುದು, ಆದ್ರೆ ಇರೋ ಹಣನ ಸರಿಯಾಗಿ ಬಳಸಲಿಲ್ಲ ಅಂದ್ರೂ ತುಂಬ ತೊಂದರೆಯಾಗುತ್ತೆ.

ಹಣ ಉಳಿಸೋದು ಹೇಗೆ? ಅನ್ನೋ ವೈಟ್‌ ಬೋರ್ಡ್‌ ಅನಿಮೇಷನ್‌ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಬಜೆಟ್‌ ಯಾಕೆ ಮಾಡಬೇಕು ಮತ್ತು ಹೇಗೆ ಮಾಡಬೇಕು?

  • ಸ್ವಲ್ಪ ಹಣವನ್ನ ಉಳಿತಾಯ ಮಾಡೋದು ಯಾಕೆ ಮುಖ್ಯ?

  • ಅನಾವಶ್ಯಕವಾಗಿ ಸಾಲ ಮಾಡೋದು ಒಳ್ಳೇದಲ್ಲ, ಯಾಕೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 53 ಮತ್ತು ಪ್ರಾರ್ಥನೆ