ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 30, 2024–ಜನವರಿ 5, 2025

ಕೀರ್ತನೆ 120-126

ಡಿಸೆಂಬರ್‌ 30, 2024–ಜನವರಿ 5, 2025

ಗೀತೆ 24 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಸ್ವದೇಶಕ್ಕೆ ವಾಪಸ್‌ ಬಂದ ಇಸ್ರಾಯೇಲ್ಯರು ಕಷ್ಟಪಟ್ಟು ದುಡಿಮೆ ಮಾಡಿದ್ರು, ಅದ್ರ ಮೇಲೆ ಯೆಹೋವನ ಆಶೀರ್ವಾದ ಇದ್ದಿದ್ರಿಂದ ಅವರು ಸಂತೋಷದಿಂದ ಕೊಯ್ಲು ಮಾಡ್ತಿದ್ದಾರೆ

1. ಕಣ್ಣೀರು ಸುರಿಸ್ತಾ ಬೀಜ ಬಿತ್ತೋರು, ಖುಷಿಯಿಂದ ಕೊಯ್ಲು ಮಾಡ್ತಾರೆ

(10 ನಿ.)

ಬಾಬೆಲ್‌ನಿಂದ ವಾಪಸ್ಸು ಬಂದ ಇಸ್ರಾಯೇಲ್ಯರಿಗೆ ಶುದ್ಧ ಆರಾಧನೆಯನ್ನ ಶುರುಮಾಡಿದಾಗ ಖುಷಿಯಾಯ್ತು (ಕೀರ್ತ 126:1-3)

ಯೂದಾಯಕ್ಕೆ ಬಂದ ಜನರು ಅವರ ಮುಂದೆ ಇದ್ದ ಬೆಟ್ಟದಂಥ ಕೆಲ್ಸ ನೋಡಿ ಕಣ್ಣೀರು ಹಾಕಿದ್ರು (ಕೀರ್ತ 126:5; ಕಾವಲಿನಬುರುಜು04 6/1 ಪುಟ 16 ಪ್ಯಾರ 10)

ಹಾಗಂತ ಅವರು ಕೈಚೆಲ್ಲಿ ಕೂರಲಿಲ್ಲ ಪ್ರಯತ್ನ ಹಾಕಿದ್ರು, ಅದಕ್ಕೇ ಅವರಿಗೆ ಆಶೀರ್ವಾದ ಸಿಕ್ತು (ಕೀರ್ತ 126:6; ಕಾವಲಿನಬುರುಜು21.11 ಪುಟ 24 ಪ್ಯಾರ 17; ಕಾವಲಿನಬುರುಜು01 7/15 ಪುಟ 18-19 ಪ್ಯಾರ 13-14; ಮುಖಪುಟ ಚಿತ್ರ ನೋಡಿ)

ಧ್ಯಾನಕ್ಕಾಗಿ: ಅರ್ಮಗೆದ್ದೋನ್‌ ನಂತರ ಭೂಮಿಲಿ ಮಾಡೋಕೆ ನಮಗೆ ಬೆಟ್ಟದಷ್ಟು ಕೆಲ್ಸ ಇರುತ್ತೆ. ಆಗ ಯಾವೆಲ್ಲಾ ಸವಾಲುಗಳು ಬರುತ್ತೆ? ಆದ್ರೆ ಅದನ್ನ ಮಾಡಿದಾಗ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರು ಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ ಮನೆ ಸೇವೆ. ಹೋದ ಸಲ ಮನೆಯವರು ಬೈಬಲನ್ನ ನಂಬಬಹುದಾ ಅಂತ ಪ್ರಶ್ನೆ ಕೇಳಿದ್ರು. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್‌ 5)

6. ಶಿಷ್ಯರಾಗೋಕೆ ಕಲಿಸಿ

ನಮ್ಮ ಕ್ರೈಸ್ತ ಜೀವನ

ಗೀತೆ 155

7. ದೇವರು ಕೊಟ್ಟಿರುವ ಮಾತಿನಲ್ಲಿ ಹರ್ಷಿಸಿ

(15 ನಿ.) ಚರ್ಚೆ.

ಬಾಬೆಲಿನ ಸೆರೆವಾಸದಲ್ಲಿದ್ದ ತನ್ನ ಜನರಿಗೆ ದೇವರು ಏನು ಮಾತು ಕೊಟ್ಟನೋ ಹಾಗೇ ನಡಕೊಂಡನು. ಅವರನ್ನ ಅಲ್ಲಿಂದ ಬಿಡಿಸಿದನು, ಅವರ ತಪ್ಪುಗಳನ್ನ ಕ್ಷಮಿಸಿದನು. (ಯೆಶಾ 33:24) ಹಾಳುಬಿದ್ದಿದ್ದ ಯೆರೂಸಲೇಮ್‌ ಪಟ್ಟಣಕ್ಕೆ ಅವರು ವಾಪಸ್ಸು ಬಂದ ಮೇಲೆ ಅವರಿಗೆ ಮತ್ತು ಅವರ ಸಾಕುಪ್ರಾಣಿಗಳಿಗೆ ಯಾವುದೇ ತೊಂದ್ರೆ ಆಗದೇ ಇರೋ ತರ ನೋಡಿಕೊಂಡನು. ಸಿಂಹದಂಥ ಕ್ರೂರ ಪ್ರಾಣಿಗಳಿಂದ ಅವರನ್ನ ಕಾಪಾಡಿದನು. (ಯೆಶಾ 65:25) ಅಷ್ಟೇ ಅಲ್ಲ, ಅವರು ಮನೆಗಳನ್ನ ಕಟ್ಟಿಕೊಂಡು, ಸ್ವಂತ ದ್ರಾಕ್ಷಿತೋಟದ ಫಲ ತಿಂದು ಖುಷಿಯಾಗಿದ್ರು. (ಯೆಶಾ 65:21) ಹೀಗೆ ಯೆಹೋವ ಅವರನ್ನ ಆಶೀರ್ವದಿಸಿದನು, ಅವರು ತುಂಬ ವರ್ಷ ನೆಮ್ಮದಿಯಾಗಿ ಬದುಕಿದ್ರು.—ಯೆಶಾ 65:22, 23.

Waterfall: Maridav/stock.adobe.com; mountains: AndreyArmyagov/stock.adobe.com

ಶಾಂತಿಯ ಬಗ್ಗೆ ದೇವರು ಕೊಟ್ಟಿರುವ ಮಾತಿನಲ್ಲಿ ಹರ್ಷಿಸಿ—ತುಣುಕು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಈ ಭವಿಷ್ಯವಾಣಿಗಳು ಸಾಂಕೇತಿಕವಾಗಿ ನಮ್ಮ ಕಾಲದಲ್ಲಿ ಹೇಗೆ ನಿಜ ಆಗ್ತಿದೆ?

  • ಹೊಸಲೋಕದಲ್ಲಿ ಇದು ಹೇಗೆ ನಿಜ ಆಗುತ್ತೆ?

  • ನೀವು ಯಾವ ಭವಿಷ್ಯವಾಣಿ ನಿಜ ಆಗೋದನ್ನ ನೋಡೋಕೆ ಕಾಯ್ತಾ ಇದ್ದೀರ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 141 ಮತ್ತು ಪ್ರಾರ್ಥನೆ