ನವೆಂಬರ್ 18-24
ಕೀರ್ತನೆ 107-108
ಗೀತೆ 23 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ‘ಯೆಹೋವನಿಗೆ ಧನ್ಯವಾದ ಹೇಳಿ, ಯಾಕಂದ್ರೆ ಆತನು ಒಳ್ಳೆಯವನು’
(10 ನಿ.)
ಯೆಹೋವ ಇಸ್ರಾಯೇಲ್ಯರನ್ನ ಬಾಬೆಲ್‌ನಿಂದ ಬಿಡಿಸಿದ ತರಾನೇ ನಮ್ಮನ್ನ ಸೈತಾನನ ಲೋಕದಿಂದ ಬಿಡಿಸಿದ್ದಾನೆ (ಕೀರ್ತ 107:1, 2; ಕೊಲೊ 1:13, 14)
ಯೆಹೋವನು ಮಾಡಿರೋ ವಿಷಯಗಳ ಬಗ್ಗೆ ನಮಗೆ ಕೃತಜ್ಞತೆ ಇದ್ರೆ ಸಭೆಯಲ್ಲಿ ನಾವು ಆತನನ್ನ ಹೊಗಳ್ತೀವಿ (ಕೀರ್ತ 107:31, 32; ಕಾವಲಿನಬುರುಜು07 5/1 ಪುಟ 8 ಪ್ಯಾರ 2)
ಯೆಹೋವ ನಮಗಾಗಿ ಮಾಡಿರೋ ಒಳ್ಳೇ ವಿಷಯಗಳ ಬಗ್ಗೆ ಯೋಚನೆ ಮಾಡುವಾಗ ಆತನ ಮೇಲಿನ ಕೃತಜ್ಞತೆ ಜಾಸ್ತಿ ಆಗುತ್ತೆ (ಕೀರ್ತ 107:43; ಕಾವಲಿನಬುರುಜು15 1/15 ಪುಟ 9 ಪ್ಯಾರ 4)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಕೀರ್ತ 108:9—ಮೋವಾಬನ್ನ ದೇವರ ಕೈಕಾಲು “ತೊಳೆಯೋ ಪಾತ್ರೆ” ಅಂತ ಹೇಳಿರೋದ್ರ ಅರ್ಥ ಏನು? (it-2-E ಪುಟ 420 ಪ್ಯಾರ 4)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 107:1-28 (ಪ್ರಗತಿ ಪಾಠ 5)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್ 4)
5. ಮತ್ತೆ ಭೇಟಿ ಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್ ಕೋರ್ಸ್ ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್ 3)
6. ಭಾಷಣ
(5 ನಿ.) ijwyp ಲೇಖನ 90—ವಿಷ್ಯ: ನೆಗೆಟಿವ್ ಯೋಚನೆಗೆ ಪಾಸಿಟಿವ್ ಪರಿಹಾರ (ಪ್ರಗತಿ ಪಾಠ 14)
ಗೀತೆ 2
7. ಗೀತೆ ಹಾಡಿ, ಯೆಹೋವನಿಗೆ ಕೃತಜ್ಞತೆ ತೋರಿಸಿ
(15 ನಿ.) ಚರ್ಚೆ.
ಯೆಹೋವ ದೇವರು ಕೆಂಪು ಸಮುದ್ರದ ಹತ್ರ ಇಸ್ರಾಯೇಲ್ಯರನ್ನ ಈಜಿಪ್ಟಿನ ಶಕ್ತಿಶಾಲಿ ಸೈನ್ಯದ ಕೈಯಿಂದ ಬಿಡಿಸಿದನು. ಆಗ ಇಸ್ರಾಯೇಲ್ಯರು ಖುಷಿಯಿಂದ ಹಾಡನ್ನ ಹಾಡ್ತಾ ಯೆಹೋವನನ್ನ ಕೊಂಡಾಡಿದರು. (ವಿಮೋ 15:1-19) ವಿಶೇಷ ಏನೆಂದ್ರೆ, ಈ ಹಾಡನ್ನ ಹಾಡೋಕೆ ಗಂಡಸ್ರು ಮುಂದೆ ಬಂದರು. (ವಿಮೋ 15:21) ಯೇಸು ಮತ್ತು ಒಂದನೇ ಶತಮಾನದ ಕ್ರೈಸ್ತರು ಕೂಡ ಗೀತೆಗಳನ್ನ ಹಾಡ್ತಾ ದೇವರನ್ನ ಸ್ತುತಿಸಿದರು. (ಮತ್ತಾ 26:30; ಕೊಲೊ 3:16) ನಾವು ಕೂಡ ಕೂಟಗಳಲ್ಲಿ, ಸಮ್ಮೇಳನ ಮತ್ತು ಅಧಿವೇಶನಗಳಲ್ಲಿ ಗೀತೆಗಳನ್ನ ಹಾಡೋ ಮೂಲಕ ಯೆಹೋವನನ್ನ ಸ್ತುತಿಸ್ತೀವಿ. ಉದಾಹರಣೆಗೆ, ನಾವು ಈಗ ತಾನೇ ಹಾಡಿದ “ಯೆಹೋವನೇ, ನಿನಗೆ ಕೃತಜ್ಞರು” ಅನ್ನೋ ಹಾಡನ್ನ 1966ರಿಂದ ಕೂಟಗಳಲ್ಲಿ ಹಾಡ್ತಿದ್ದೀವಿ!
ಕೆಲವು ಸಂಸ್ಕೃತಿಗಳಲ್ಲಿ ಗಂಡಸರು ಬೇರೆಯವರ ಮುಂದೆ ಹಾಡೋಕೆ ನಾಚಿಕೆಪಡ್ತಾರೆ. ಇನ್ನು ಕೆಲವರು ನನಗೆ ಅಷ್ಟು ಚೆನ್ನಾಗಿ ಹಾಡೋಕೆ ಬರಲ್ಲ ಅಂತ ಹೇಳಿ ಹಿಂದೆ ಸರಿಯುತ್ತಾರೆ. ಆದ್ರೆ ನಾವು ಒಂದು ವಿಷಯವನ್ನ ನೆನಪಿಡಬೇಕು, ಅದೇನಂದ್ರೆ ಕೂಟಗಳಲ್ಲಿ ಹಾಡೋದು ಆರಾಧನೆಯ ಒಂದು ಭಾಗ. ನಮ್ಮ ಸಂಘಟನೆ ಮನ ಮುಟ್ಟೋ ಹಾಡುಗಳನ್ನ ತಯಾರಿಸೋಕೆ ಮತ್ತು ಪ್ರತೀ ಕೂಟದಲ್ಲಿ ಯಾವ ಹಾಡು ಹಾಡಬೇಕು ಅಂತ ತೀರ್ಮಾನ ಮಾಡೋಕೆ ತುಂಬ ಶ್ರಮ ಹಾಕ್ತಿದೆ. ಹಾಗಾಗಿ ನಾವೇನು ಮಾಡಬೇಕು? ಮನಸಾರೆ, ಗಟ್ಟಿಯಾಗಿ ಗೀತೆಗಳನ್ನ ಹಾಡಬೇಕು. ಹೀಗೆ ನಮ್ಮ ತಂದೆ ಯೆಹೋವನ ಮೇಲಿರೋ ಪ್ರೀತಿ ಮತ್ತು ಗಣ್ಯತೆಯನ್ನ ತೋರಿಸಬೇಕು.
ನಮ್ಮ ಇತಿಹಾಸ ಸಾಗುತ್ತಿದೆ—ಹಾಡೆಂಬ ಉಡುಗೊರೆ, ಭಾಗ 2 ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
-
1944ರಲ್ಲಿ ಏನಾಯ್ತು?
-
ಸೈಬೀರಿಯಾದಲ್ಲಿದ್ದ ಸಹೋದರರು ರಾಜ್ಯ ಗೀತೆಯನ್ನ ಹಾಡೋದ್ರ ಕಡೆ ಹೇಗೆ ಗಣ್ಯತೆ ತೋರಿಸಿದ್ರು?
-
ಯೆಹೋವನ ಸಾಕ್ಷಿಗಳು ಗೀತೆಗಳನ್ನ ಹಾಡೋಕೆ ಯಾಕೆ ಪ್ರಾಮುಖ್ಯತೆ ಕೊಡ್ತಾರೆ?
8. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 18ರ ಪ್ಯಾರ 6-15