ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನವೆಂಬರ್‌ 25–‏ಡಿಸೆಂಬರ್‌ 1

ಕೀರ್ತನೆ 109-112

ನವೆಂಬರ್‌ 25–‏ಡಿಸೆಂಬರ್‌ 1

ಗೀತೆ 99 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ರಾಜ ಯೇಸುಗೆ ಬೆಂಬಲ ಕೊಡಿ!

(10 ನಿ.)

ಯೇಸು ಸ್ವರ್ಗಕ್ಕೆ ಹೋದಮೇಲೆ ಯೆಹೋವನ ಬಲಗಡೆಯಲ್ಲಿ ಕೂತ್ಕೊಂಡನು (ಕೀರ್ತ 110:1; ಕಾವಲಿನಬುರುಜು06 9/1 ಪುಟ 18 ಪ್ಯಾರ 6)

1914ರಲ್ಲಿ ಯೇಸು ತನ್ನ ಶತ್ರುಗಳನ್ನ ಸೋಲಿಸಿದನು (ಕೀರ್ತ 110:2; ಕಾವಲಿನಬುರುಜು00 4/1 ಪುಟ 18 ಪ್ಯಾರ 3)

ನಾವು ಮನಸಾರೆ ದೇವರ ಸೇವೆ ಮಾಡೋ ಮೂಲಕ ಯೇಸುವಿನ ಆಳ್ವಿಕೆಗೆ ಬೆಂಬಲ ಕೊಡಬಹುದು (ಕೀರ್ತ 110:3; ಶುಶ್ರೂಷಾ ಶಾಲೆ ಪುಟ 76 ಪ್ಯಾರ 3)

ನಿಮ್ಮನ್ನೇ ಕೇಳ್ಕೊಳ್ಳಿ, ‘ದೇವರ ಆಳ್ವಿಕೆಗೆ ಬೆಂಬಲ ಕೊಡೋಕೆ ನಾನು ಯಾವ ಗುರಿಗಳನ್ನ ಇಡಬಹುದು?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 110:4—ಈ ವಚನದಲ್ಲಿರೋ ಒಪ್ಪಂದವನ್ನ ವಿವರಿಸಿ. (it-1-E ಪುಟ 524 ಪ್ಯಾರ 2)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಮನೆ-ಮನೆ ಸೇವೆ: ಕರಪತ್ರವನ್ನ ಬಳಸಿ ಸಂಭಾಷಣೆ ಶುರುಮಾಡಿ. (ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್‌ 3)

5. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಅಭಿನಯ. ijwfq ಲೇಖನ 23—ವಿಷ್ಯ: ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ? (ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್‌ 4)

6. ಶಿಷ್ಯರಾಗೋಕೆ ಕಲಿಸಿ

ನಮ್ಮ ಕ್ರೈಸ್ತ ಜೀವನ

ಗೀತೆ 101

7. ದೇವರ ಸರ್ಕಾರಕ್ಕೆ ನಿಷ್ಠೆ ತೋರಿಸ್ತಾ ಹೇಗೆ ಬೆಂಬಲ ಕೊಡಬಹುದು?

(15 ನಿ.) ಚರ್ಚೆ.

ಯೆಹೋವ ದೇವರಿಗೆ ಸ್ವರ್ಗವನ್ನ ಮತ್ತು ಭೂಮಿಯನ್ನ ಆಳೋ ಹಕ್ಕಿದೆ ಅನ್ನೋದಕ್ಕೆ ಆತನ ಸರ್ಕಾರನೇ ಸಾಕ್ಷಿ. (ದಾನಿ 2:44, 45) ಹಾಗಾಗಿ ದೇವರ ಸರ್ಕಾರಕ್ಕೆ ನಮ್ಮಿಂದಾದಷ್ಟು ಬೆಂಬಲ ಕೊಡೋ ಮೂಲಕ ಯೆಹೋವನಿಗೆ ಇಡೀ ವಿಶ್ವವನ್ನ ಆಳೋ ಹಕ್ಕಿದೆ ಅಂತ ತೋರಿಸ್ತೀವಿ.

‘ಸಮಾಧಾನದ ಪ್ರಭುವನ್ನು’ ನಿಷ್ಠೆಯಿಂದ ಬೆಂಬಲಿಸಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ನಾವು ದೇವರ ಸರ್ಕಾರಕ್ಕೆ ಹೇಗೆ ನಿಷ್ಠೆಯಿಂದ ಬೆಂಬಲ ಕೊಡಬಹುದು?

ಈ ಕೆಳಗಿನ ವಿಷಯಗಳಲ್ಲಿ ನಾವು ದೇವರ ಸರ್ಕಾರಕ್ಕೆ ಹೇಗೆ ಬೆಂಬಲ ಕೊಡಬಹುದು ಅಂತ ತಿಳಿಸೋ ಒಂದು ವಚನ ಬರೆಯಿರಿ.

  • ನಮ್ಮ ಜೀವನದಲ್ಲಿ ದೇವರ ಸರ್ಕಾರಕ್ಕೆ ಮೊದಲ ಸ್ಥಾನ ಕೊಡಬೇಕು.

  • ದೇವರ ಸರ್ಕಾರ ಇಟ್ಟಿರೋ ನೀತಿ-ನಿಯಮಗಳನ್ನ ಪಾಲಿಸಬೇಕು.

  • ದೇವರ ಸರ್ಕಾರದ ಬಗ್ಗೆ ಹುರುಪಿಂದ ಬೇರೆಯವರಿಗೆ ಹೇಳಬೇಕು.

  • ಸರ್ಕಾರಗಳಿಗೆ ಗೌರವ ಕೊಡಬೇಕು, ಆದ್ರೆ ಅವರ ನಿಯಮಗಳು ದೇವರ ನಿಯಮಕ್ಕೆ ವಿರುದ್ಧವಾಗಿದ್ರೆ, ದೇವರ ನಿಯಮವನ್ನೇ ಪಾಲಿಸಬೇಕು.

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 10 ಮತ್ತು ಪ್ರಾರ್ಥನೆ