ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನವೆಂಬರ್‌ 4-10

ಕೀರ್ತನೆ 105

ನವೆಂಬರ್‌ 4-10

ಗೀತೆ 152 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ‘ತನ್ನ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ’

(10 ನಿ.)

ಯೆಹೋವ ದೇವರು ಅಬ್ರಹಾಮನ ಜೊತೆ ಒಂದು ಒಪ್ಪಂದವನ್ನ ಮಾಡಿದನು, ಅದರ ಬಗ್ಗೆ ಇಸಾಕ ಮತ್ತು ಯಾಕೋಬನಿಗೂ ಹೇಳಿದನು (ಆದಿ 15:18; 26:3; 28:13; ಕೀರ್ತ 105:8-11)

ಈ ಒಪ್ಪಂದ ನಿಜ ಆಗಲ್ಲ ಅಂತ ಅನೇಕರಿಗೆ ಅನಿಸ್ತು (ಕೀರ್ತ 105:12, 13; ಕಾವಲಿನಬುರುಜು23.04 ಪುಟ 28 ಪ್ಯಾರ 11-12)

ಅಬ್ರಹಾಮನ ಜೊತೆ ಮಾಡಿದ ಒಪ್ಪಂದವನ್ನ ಯೆಹೋವ ಯಾವತ್ತೂ ಮರೀಲಿಲ್ಲ (ಕೀರ್ತ 105:42-44; it-2-E ಪುಟ 1201 ಪ್ಯಾರ 2)


ನಿಮ್ಮನ್ನೇ ಕೇಳ್ಕೊಳ್ಳಿ, ‘ಈ ಘಟನೆ ಯೆಹೋವನನ್ನ ಪೂರ್ತಿಯಾಗಿ ನಂಬೋಕೆ ನಮಗೆ ಹೇಗೆ ಸಹಾಯ ಮಾಡುತ್ತೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 105:17-19 —ಯೋಸೇಫನಿಗೆ ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ ‘ಯೆಹೋವನ ಮಾತು’ ಹೇಗೆ ಸಹಾಯ ಮಾಡ್ತು? (ಕಾವಲಿನಬುರುಜು86-E 11/1 ಪುಟ 19 ಪ್ಯಾರ 15)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(1 ನಿ.) ಮನೆ-ಮನೆ ಸೇವೆ: ಮನೆಯವರು ಬಿಜ಼ಿಯಾಗಿದ್ದಾರೆ. (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 5)

5. ಸಂಭಾಷಣೆ ಶುರುಮಾಡಿ

(2 ನಿ.) ಮನೆ-ಮನೆ ಸೇವೆ: ಮನೆಯವರು ವಾದಮಾಡೋಕೆ ಶುರುಮಾಡಿದಾಗ ಶಾಂತವಾಗಿ ಸಂಭಾಷಣೆ ಮುಗಿಸಿ. (ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್‌ 5)

6. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ಹೋದ ಸಲ ಮನೆಯವರು ಆಸಕ್ತಿ ತೋರಿಸಿದ ವಿಷಯದ ಬಗ್ಗೆ ಒಂದು ಪತ್ರಿಕೆ ಕೊಡಿ. (ಪ್ರೀತಿಸಿ-ಕಲಿಸಿ ಪಾಠ 8ರ ಪಾಯಿಂಟ್‌ 3)

7. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: JW ಲೈಬ್ರರಿ ಆ್ಯಪ್‌ ಬಗ್ಗೆ ಹೇಳಿ, ಅದನ್ನ ಡೌನ್‌ಲೋಡ್‌ ಮಾಡೋಕೆ ಸಹಾಯಮಾಡಿ. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್‌ 5)

ನಮ್ಮ ಕ್ರೈಸ್ತ ಜೀವನ

ಗೀತೆ 150

8. ಪ್ರೀತಿ ತೋರಿಸೋ ವಿಧ

(15 ನಿ.) ಚರ್ಚೆ.

ದೇವರ ಸೇವೆಗಾಗಿ ನಾವು ನಮ್ಮ ಸಮಯ, ಶಕ್ತಿ ಮತ್ತು ಹಣವನ್ನ ಉಪಯೋಗಿಸ್ತೀವಿ. ಹೀಗೆ ಯೆಹೋವ ದೇವರು ಆರಿಸಿರೋ ರಾಜ ಕ್ರಿಸ್ತ ಯೇಸು ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ತೋರಿಸ್ತೀವಿ. ಹೀಗೆ ಮಾಡೋದಾದ್ರೆ ಯೆಹೋವನ ಮನಸ್ಸಿಗೆ ಖುಷಿಯಾಗುತ್ತೆ, ನಮ್ಮ ಸಹೋದರ ಸಹೋದರಿಯರಿಗೂ ಸಹಾಯ ಆಗುತ್ತೆ. (ಯೋಹಾ 14:23) ನಾವು ಕೊಡೋ ಕಾಣಿಕೆಗಳಿಂದ ಎಲ್ಲಾ ಕಡೆ ಇರೋ ನಮ್ಮ ಸಹೋದರ ಸಹೋದರಿಯರಿಗೆ ಎಷ್ಟು ಪ್ರಯೋಜನ ಆಗ್ತಿದೆ ಅಂತ jw.orgನಲ್ಲಿರೋ ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು ಅನ್ನೋ ಸರಣಿ ಲೇಖನಗಳನ್ನ ನೋಡಿ.

ನೀವು ಕೊಡೋ ಕಾಣಿಕೆಗಳು ತುಂಬಾ ಅಮೂಲ್ಯ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡ್ತಿರೋ ನಮ್ಮ ಸಹೋದರರಿಗೆ ನಾವು ಕೊಡೋ ಕಾಣಿಕೆಗಳಿಂದ ಹೇಗೆ ಪ್ರಯೋಜನ ಆಗ್ತಿದೆ?

  • ಕಾಣಿಕೆಗಳನ್ನ ‘ಸಮಾನವಾಗಿ‘ ಉಪಯೋಗಿಸಿದ್ರಿಂದ ಸಭಾಗೃಹಗಳನ್ನ ಕಟ್ಟೋಕೆ ಹೇಗೆ ಸಹಾಯ ಆಗಿದೆ?—2ಕೊರಿಂ 8:14

  • ಬೈಬಲನ್ನ ಬೇರೆಬೇರೆ ಭಾಷೆಗಳಿಗೆ ಭಾಷಾಂತರ ಮಾಡೋಕೆ ಕಾಣಿಕೆಗಳನ್ನ ಉಪಯೋಗಿಸಿದ್ರಿಂದ ಯಾವೆಲ್ಲ ಪ್ರಯೋಜನ ಆಗಿದೆ?

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 115 ಮತ್ತು ಪ್ರಾರ್ಥನೆ