ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ

ಯುವಜನರೇ—ತಡಮಾಡದೆ ‘ಮಹಾದ್ವಾರದಲ್ಲಿ’ ಹೋಗಿ

ಅನೇಕ ಯುವಜನರು ತಮ್ಮ ವಯಸ್ಸು ಹಾಗೇ ಇರುತ್ತದೆ ಎಂದು ನೆನಸುತ್ತಾರೆ. ಈ ಸೈತಾನನ ಲೋಕದಲ್ಲಿ ತಮಗೆ ‘ಕಷ್ಟದ ದಿನಗಳು’ ಬರುವುದಿಲ್ಲ ಎಂದು ಅಂದುಕೊಂಡಿದ್ದಾರೆ. (ಪ್ರಸಂ 12:1) ನೀವು ಒಬ್ಬ ಯುವವ್ಯಕ್ತಿ ಆಗಿರುವಲ್ಲಿ ಪೂರ್ಣ ಸಮಯದ ಸೇವೆಯ ಗುರಿಯನ್ನು ಮಟ್ಟಲು ಇನ್ನೂ ಸಮಯ ಇದೆ ಎಂದು ಯೋಚಿಸುತ್ತಿದ್ದೀರಾ?

‘ಅನಿರೀಕ್ಷಿತ ಘಟನೆಗಳು ಯಾರಿಗೂ ತಪ್ಪಿದ್ದಲ್ಲ’, ಯುವಜನರಿಗೆ ಸಹ. (ಪ್ರಸಂ 9:11) “ನಾಳೆ ನಿಮ್ಮ ಜೀವನವು ಹೇಗಿರುವುದು ಎಂಬುದು ನಿಮಗೆ ತಿಳಿದಿಲ್ಲ.” (ಯಾಕೋ 4:14) ಹಾಗಾಗಿ ಆಧ್ಯಾತ್ಮಿಕ ಗುರಿಗಳನ್ನು ಮುಂದೆ ಮುಟ್ಟಿದರಾಯಿತು ಎಂದು ನೆನಸಬೇಡಿ. “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು” ತೆರೆದಿರುವಾಗಲೇ ಅದರಲ್ಲಿ ಹೋಗಿ, ತಡಮಾಡಬೇಡಿ. (1ಕೊರಿಂ 16:9) ಆಗ ನಿಮಗೆ ಯಾವುದೇ ವಿಷಾದ ಇರುವುದಿಲ್ಲ.

ನೀವು ಇಡಬಹುದಾದ ಗುರಿಗಳು:

  • ಬೇರೆ ಭಾಷೆ ಕಲಿತು ಸಾರುವುದು

  • ಪಯನೀಯರ್‌ ಸೇವೆ

  • ಬೈಬಲ್‌ ಶಾಲೆಗಳು

  • ನಿರ್ಮಾಣ ಕಾರ್ಯ

  • ಬೆತೆಲ್‌ ಸೇವೆ

  • ಸಂಚರಣ ಸೇವೆ

ನನ್ನ ಗುರಿಗಳು: