ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 27-31

ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು

ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು

ರಾಜ ಲೆಮೂವೇಲನಿಗೆ ಅವನ ತಾಯಿ ಕೊಟ್ಟ ಅಮೂಲ್ಯ ಸಲಹೆಗಳು ಜ್ಞಾನೋಕ್ತಿ 31⁠ನೇ ಅಧ್ಯಾಯದಲ್ಲಿವೆ. ಇದರಿಂದ ಅವನು, ಒಬ್ಬ ಗುಣವತಿಯಾದ ಪತ್ನಿಯನ್ನು ಆರಿಸಿಕೊಳ್ಳುವಾಗ ಅವಳಲ್ಲಿ ಯಾವ ಗುಣಗಳನ್ನು ನೋಡಬೇಕು ಎಂದು ಕಲಿತನು.

ಗುಣವತಿಯಾದ ಪತ್ನಿ ಭರವಸಾರ್ಹಳಾಗಿ ಇರುತ್ತಾಳೆ

31:10-12

  • ಅವಳು ಅಧೀನಳಾಗಿದ್ದು, ಕುಟುಂಬಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಾಗ ಉತ್ತಮ ಸಲಹೆಗಳನ್ನು ಕೊಡುತ್ತಾಳೆ

  • ಆಕೆ ಒಳ್ಳೆಯ ನಿರ್ಣಯ ಮಾಡುತ್ತಾಳೆಂದು ಗಂಡ ಭರವಸೆ ಇಡುತ್ತಾನೆ. ಹಾಗಾಗಿ ಎಲ್ಲದಕ್ಕೂ ಆಕೆ ತನ್ನ ಒಪ್ಪಿಗೆ ಪಡೆಯಬೇಕೆಂದು ಅವನು ಒತ್ತಾಯಿಸುವುದಿಲ್ಲ

ಗುಣವತಿಯಾದ ಪತ್ನಿ ಕಷ್ಟಪಟ್ಟು ಕೆಲಸ ಮಾಡುತ್ತಾಳೆ

31:13-27

  • ಅವಳು ವಿವೇಚನೆಯಿಂದ ಖರ್ಚು ಮಾಡುತ್ತಾಳೆ, ಕುಟುಂಬಕ್ಕೆ ಆಹಾರವನ್ನು ಕೊಡುತ್ತಾಳೆ ಮತ್ತು ಬಟ್ಟೆ-ಬರೆ ಇತ್ಯಾದಿ ವಿಷಯಗಳಲ್ಲಿ ತನ್ನ ಕುಟುಂಬ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಾಳೆ

  • ಅವಳು ಹಗಲೂ ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ, ಮನೆಯವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ

ಗುಣವತಿಯಾದ ಪತ್ನಿ ಆಧ್ಯಾತ್ಮಿಕ ವ್ಯಕ್ತಿಯಾಗಿರುತ್ತಾಳೆ

31:30

  • ದೇವರಿಗೆ ಭಯಪಡುತ್ತಾಳೆ ಮತ್ತು ಆತನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳುತ್ತಾಳೆ