ನಮ್ಮ ಕ್ರೈಸ್ತ ಜೀವನ
ಜನರು ಆಕೆಯ ಗಂಡನನ್ನು ಗೌರವಿಸುವರು
ಗುಣವತಿಯಾದ ಹೆಂಡತಿ ತನ್ನ ಗಂಡನ ಮೇಲೆ ಒಳ್ಳೇ ಪ್ರಭಾವ ಬೀರುತ್ತಾಳೆ. ರಾಜ ಲೆಮೂವೇಲನ ದಿನಗಳಲ್ಲಿ, ಗುಣವತಿಯಾದ ಸ್ತ್ರೀಯ ಗಂಡನು ‘ನ್ಯಾಯಸ್ಥಾನದಲ್ಲಿ ಪ್ರಸಿದ್ಧನಾಗಿರುತ್ತಿದ್ದನು.’ (ಜ್ಞಾನೋ 31:23) ಇಂದು ಸಹ ಗೌರವಾರ್ಹ ಪುರುಷರು ಹಿರಿಯರಾಗಿ, ಸಹಾಯಕ ಸೇವಕರಾಗಿ ಸೇವೆ ಮಾಡುತ್ತಾರೆ. ವಿವಾಹವಾದವರು ಇಂಥ ಸೇವೆ ಮಾಡಬೇಕೆಂದರೆ ಅವರ ಹೆಂಡತಿಯರ ಒಳ್ಳೇ ನಡತೆ ಮತ್ತು ಬೆಂಬಲ ತುಂಬ ಅಗತ್ಯ. (1ತಿಮೊ 3:4, 11) ಇಂಥ ಗುಣವತಿಯರಾದ ಹೆಂಡತಿಯರನ್ನು ಅವರ ಗಂಡಂದಿರು ಮಾತ್ರವಲ್ಲ, ಸಭೆ ಸಹ ತುಂಬ ಮೆಚ್ಚಿಕೊಳ್ಳುತ್ತದೆ.
ತನ್ನ ಗಂಡನು ಸಭೆಯ ಸೇವೆ ಮಾಡಲು ಗುಣವತಿಯಾದ ಪತ್ನಿ ಹೇಗೆ ಸಹಾಯ ಮಾಡುತ್ತಾಳೆ?
-
ತನ್ನ ಮಾತುಗಳಿಂದ ಗಂಡನನ್ನು ಪ್ರೋತ್ಸಾಹಿಸುವ ಮೂಲಕ.—ಜ್ಞಾನೋ 31:26
-
ಸಭೆಯ ಕೆಲಸಗಳಿಗೆ ಅವರನ್ನು ಬಿಟ್ಟುಕೊಡುವ ಮೂಲಕ.—1ಥೆಸ 2:7, 8
-
ಇರುವುದರಲ್ಲೇ ತೃಪ್ತರಾಗಿರುವ ಮೂಲಕ.—1ತಿಮೊ 6:8
-
ಸಭೆಯ ಖಾಸಗಿ ವಿಷಯಗಳ ಬಗ್ಗೆ ಕೇಳದಿರುವ ಮೂಲಕ.—1ತಿಮೊ 2:11, 12; 1ಪೇತ್ರ 4:15