ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ನಮಗೆ ಏನೇನು ಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು

ನಮಗೆ ಏನೇನು ಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು

ನಮ್ಮ ಆಧ್ಯಾತ್ಮಿಕ ಅಗತ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಯೆಹೋವ ದೇವರು, ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ ಮೂಲಕ ನಮಗೆ “ತಕ್ಕ ಸಮಯಕ್ಕೆ” ಆಹಾರ ಕೊಡುತ್ತಾ ಇದ್ದಾನೆ. (ಮತ್ತಾ 24:45) ಈ ಆಳಿನ ಮೂಲಕವೇ ನಮಗಾಗಿ ಅಧಿವೇಶನಗಳನ್ನು ಮತ್ತು ಮಧ್ಯವಾರದ ಕೂಟಗಳನ್ನು ದೇವರು ಏರ್ಪಡಿಸಿದ್ದಾನೆ. ಈ ಏರ್ಪಾಡುಗಳು ನಮಗೆ ಏನು ಬೇಕು ಅನ್ನೋದು ಯೆಹೋವನಿಗೆ ಗೊತ್ತು ಅಂತ ತೋರಿಸುತ್ತವೆ.

ಶಿಕ್ಷಣ ಸಮಿತಿಯಿಂದ ವರದಿ-2017 ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಅಧಿವೇಶನಗಳ ಮೂಲಕ ನಮಗೆ ತಕ್ಕ ಸಮಯಕ್ಕೆ ಸಿಗುತ್ತಿರುವ ಆಹಾರದ ನಿಜವಾದ ಮೂಲ ಯಾರು? ಆತನನ್ನು ಯಾಕೆ ಸ್ತುತಿಸಬೇಕು?

  • ಒಂದು ಅಧಿವೇಶನದ ತಯಾರಿ ಯಾವಾಗ ಶುರು ಆಗುತ್ತೆ?

  • ಅಧಿವೇಶನದ ವಿಷಯಗಳನ್ನು ಹೇಗೆ ಆರಿಸಿಕೊಳ್ಳಲಾಗುತ್ತೆ?

  • ಅಧಿವೇಶನದ ಸಿದ್ಧತೆಯಲ್ಲಿ ಯಾವೆಲ್ಲಾ ಕೆಲಸಗಳು ಸೇರಿವೆ?

  • ಮಧ್ಯವಾರದ ಕೂಟಗಳಲ್ಲಿ ಚರ್ಚಿಸಲಾಗುವ ಮಾಹಿತಿಯನ್ನು ತಯಾರಿಸಲು ಗಿಲ್ಯಡ್‌ ಶಾಲೆಯ ಅಧ್ಯಯನ ವಿಧಾನಗಳನ್ನೇ ಹೇಗೆ ಬಳಸುತ್ತಾರೆ?

  • ಕೈಪಿಡಿಯನ್ನು ತಯಾರಿಸಲು ಬೇರೆ ಬೇರೆ ಡಿರ್ಪಾಟ್‌ಮೆಂಟ್‌ಗಳು ಹೇಗೆ ಒಟ್ಟಿಗೆ ಕೆಲಸ ಮಾಡುತ್ತವೆ?

ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಬಗ್ಗೆ ನಿಮಗೆ ಹೇಗೆ ಅನಿಸುತ್ತೆ?