ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 1-3

“ನಿನ್ನ ಕೃತ್ಯಗಳನ್ನು ಬಲ್ಲೆನು”

“ನಿನ್ನ ಕೃತ್ಯಗಳನ್ನು ಬಲ್ಲೆನು”

1:20; 2:1, 2

  • “ಏಳು ನಕ್ಷತ್ರಗಳು”: ಮುಖ್ಯವಾಗಿ ಅಭಿಷಿಕ್ತ ಹಿರಿಯರಿಗೆ ಸೂಚಿಸುತ್ತೆ. ಸಭೆಯಲ್ಲಿರುವ ಬೇರೆ ಎಲ್ಲಾ ಹಿರಿಯರನ್ನು ಸೂಚಿಸುತ್ತೆ ಸಹ.

  • “(ಯೇಸುವಿನ) ಬಲಗೈಯಲ್ಲಿ”: ಅಂದರೆ, ನಕ್ಷತ್ರಗಳು ಯೇಸುವಿನ ಪೂರ್ಣ ಹತೋಟಿಯಲ್ಲಿ ಇದೆ. ಯೇಸುಗೆ ಅವುಗಳ ಮೇಲೆ ಅಧಿಕಾರ ಇದೆ. ಆತನೇ ಅವನ್ನು ಮಾರ್ಗದರ್ಶಿಸುತ್ತಾನೆ. ಹಾಗಾಗಿ ಹಿರಿಯ ಮಂಡಲಿಯ ಸದಸ್ಯರಲ್ಲಿ ಯಾರನ್ನಾದರೂ ತಿದ್ದುವ ಅವಶ್ಯಕತೆ ಇದ್ದರೆ, ಅವರನ್ನು ಯೇಸು ತಕ್ಕ ಸಮಯದಲ್ಲಿ, ತನ್ನದೇ ಆದ ವಿಧಾನದಲ್ಲಿ ಸರಿಪಡಿಸುತ್ತಾನೆ.

  • “ಚಿನ್ನದ ಏಳು ದೀಪಸ್ತಂಭಗಳು”: ಅಂದರೆ ಕ್ರೈಸ್ತ ಸಭೆಗಳು. ಗುಡಾರದಲ್ಲಿದ್ದ ದೀಪಸ್ತಂಭ ಬೆಳಕನ್ನು ಪ್ರಕಾಶಿಸುತ್ತಿತ್ತು. ಅದೇ ರೀತಿಯಲ್ಲಿ ಇಂದು ಕ್ರೈಸ್ತ ಸಭೆಗಳು ಆಧ್ಯಾತ್ಮಿಕ ಬೆಳಕನ್ನು ಪ್ರಕಾಶಿಸುತ್ತವೆ. (ಮತ್ತಾ 5:14) ಯೇಸು “ದೀಪಸ್ತಂಭಗಳ ಮಧ್ಯೆ ನಡೆದಾಡುವವನು” ಅಂದರೆ ಅವನು ಎಲ್ಲಾ ಸಭೆಗಳ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾನೆ.