ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸಂತೋಷದಿಂದ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ

ಸಂತೋಷದಿಂದ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ

2 ಕೊರಿಂಥ 9:7 ರಲ್ಲಿ, “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಯಾಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” ಅಂತ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಇಂದು, ಇಲ್ಲಿನ ಮತ್ತು ಲೋಕವ್ಯಾಪಕವಾಗಿ ನಡೆಯುತ್ತಿರುವ ಯೆಹೋವನ ಸಾಕ್ಷಿಗಳ ಕೆಲಸಗಳನ್ನು ಬೆಂಬಲಿಸಲು ನಾವು ಆನ್‌ಲೈನ್‌ ಮೂಲಕಾನೂ ಕಾಣಿಕೆಗಳನ್ನು ಕಳಿಸಬಹುದು.

ಆನ್‌ಲೈನ್‌ನಲ್ಲಿ ದಾನಗಳನ್ನು ನೀಡುವುದು ಹೇಗೆ? ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನಾವು ನಮ್ಮ ದೇಶದಲ್ಲಿ ಯಾವೆಲ್ಲಾ ವಿಧಾನಗಳಲ್ಲಿ ಕಾಣಿಕೆಗಳನ್ನು ಕೊಡಬಹುದು ಅಂತ ತಿಳಿಯಲು ‘ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳನ್ನು ನೀಡಿ’ ಎಂಬ ಪುಟಕ್ಕೆ ಹೋಗೋದು ಹೇಗೆ?

  • ಎಲೆಕ್ಟ್ರಾನಿಕ್‌ ರೂಪದಲ್ಲಿ ಕಾಣಿಕೆಗಳನ್ನು ಕೊಡುವುದರಿಂದ ಕೆಲವರು ಹೇಗೆಲ್ಲಾ ಪ್ರಯೋಜನ ಪಡೆದಿದ್ದಾರೆ?

  • ಯಾವೆಲ್ಲಾ ವಿಧಾನದಲ್ಲಿ ಕಾಣಿಕೆಗಳನ್ನು ಕೊಡಬಹುದು?

  • ಹೊಸ ಸಾಧನಗಳನ್ನು ಬಳಸುವುದು ಹೇಗೆ ಅಂತ ಗೊತ್ತಿಲ್ಲ ಅಂದರೆ ಏನು ಮಾಡಬಹುದು?