ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ

ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ

ಕ್ರೈಸ್ತರು ತಮ್ಮ ಮದುವೆಯ ಪ್ಲಾನ್‌ ಮಾಡುವಾಗ ಹಲವಾರು ತೀರ್ಮಾನಗಳನ್ನು ಮಾಡಬೇಕಾಗುತ್ತೆ. ಕೆಲವೊಮ್ಮೆ ಹೊರಗಿನವರ ತರ ಆಡಂಭರದ ಮದುವೆ ಮಾಡಿಕೊಳ್ಳಬೇಕೆಂದು ಪರಿಚಯಸ್ಥರು ಒತ್ತಡ ಹಾಕಬಹುದು. ಅಷ್ಟೇ ಅಲ್ಲ ಕುಟುಂಬದವರು, ಸ್ನೇಹಿತರು ಕೂಡ ಮದುವೆ ಹೀಗೀಗೇ ನಡೆಯಬೇಕು ಅಂತ ತುಂಬ ಪ್ಲಾನ್‌ಗಳನ್ನು ಮಾಡಿರಬಹುದು. ಈ ವಿಶೇಷ ದಿನಕ್ಕಾಗಿ ಹೇಗೆ ಪ್ಲಾನ್‌ ಮಾಡಬೇಕು ಅಂತ ಬೈಬಲ್‌ನಲ್ಲಿ ಸಲಹೆಗಳು ಇವೆ. ಈ ಸಲಹೆಗಳನ್ನು ಪಾಲಿಸಿದರೆ, “ನಾವು ಅದ್ಧೂರಿ ಮದುವೆ ಆಗಬಾರದಿತ್ತು” ಅಂತ ಮುಂದೆ ಕೊರಗೋ ಪರಿಸ್ಥಿತಿ ಬರಲ್ಲ. ನಮ್ಮ ಮನಸ್ಸಾಕ್ಷಿಯೂ ಶುದ್ಧವಾಗಿರುತ್ತೆ. ಈ ಬೈಬಲ್‌ ಸಲಹೆಗಳು ಯಾವುವು?

ಯೆಹೋವನಿಗೆ ಮಹಿಮೆ ತರುವ ಮದುವೆ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಬೈಬಲ್‌ ಸಲಹೆಗಳನ್ನು ಪಾಲಿಸಿದ್ದರಿಂದ ನಿಕ್‌ ಮತ್ತು ಜ್ಯೂಲಿಯಾನಾಗೆ ಹೇಗೆ ಸಹಾಯ ಆಯ್ತು?

  • ವಧು-ವರರು, ಮದುವೆಯ ಏರ್ಪಾಡುಗಳನ್ನು ನೋಡಿಕೊಳ್ಳಲು ‘ಔತಣದ ಮೇಲ್ವಿಚಾರಕನನ್ನಾಗಿ’ ಆಧ್ಯಾತ್ಮಿಕವಾಗಿ ಪ್ರೌಢನಾದ ಕ್ರೈಸ್ತ ಸಹೋದರನನ್ನೇ ಯಾಕೆ ಆರಿಸಿಕೊಳ್ಳಬೇಕು?—ಯೋಹಾ 2:9, 10.

  • ನಿಕ್‌ ಮತ್ತು ಜ್ಯೂಲಿಯಾನ ಸರಳವಾಗಿ ಮದುವೆ ಆಗಲು ಯಾಕೆ ನಿರ್ಧರಿಸಿದರು?

  • ಮದುವೆಯ ಕಾರ್ಯಕ್ರಮ ಹೇಗಿರಬೇಕು ಅಂತ ನಿರ್ಧರಿಸುವ ಜವಾಬ್ದಾರಿ ಯಾರಿಗಿದೆ?—ಕಾವಲಿನಬುರುಜು06 11/1 ಪುಟ 18 ಪ್ಯಾರ 10.